Saturday, June 6, 2026
Homeತಾಜಾ ಸುದ್ದಿತಮಿಳುನಾಡು ಬಿಜೆಪಿಗೆ ದೊಡ್ಡ ಆಘಾತ: ಪಕ್ಷಕ್ಕೆ ಅಣ್ಣಾಮಲೈ ಗುಡ್‌ಬೈ; ರಾಜೀನಾಮೆ ಅಂಗೀಕಾರ!

ತಮಿಳುನಾಡು ಬಿಜೆಪಿಗೆ ದೊಡ್ಡ ಆಘಾತ: ಪಕ್ಷಕ್ಕೆ ಅಣ್ಣಾಮಲೈ ಗುಡ್‌ಬೈ; ರಾಜೀನಾಮೆ ಅಂಗೀಕಾರ!

- Advertisement -
- Advertisement -

ಹೊಸದಿಲ್ಲಿ: ತಮಿಳುನಾಡು ರಾಜಕೀಯದಲ್ಲಿ ಕಮಲ ಪಕ್ಷದ ಹೊಸ ಅಲೆ ಮೂಡಿಸುವ ಭರವಸೆ ನೀಡಿ, ಸಾಂಪ್ರದಾಯಿಕ ದ್ರಾವಿಡ ರಾಜಕಾರಣವನ್ನು ಮೀರಿ ಮುನ್ನಡೆಯುವ ಆಶಯ ಹೊಂದಿದ್ದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಅಧಿಕೃತವಾಗಿ ಕಮಲದ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಇದೀಗ ಅಂಗೀಕರಿಸಿದ್ದು, ಈ ಮೂಲಕ ಕಮಲ ಪಾಳ್ಯದೊಂದಿಗೆ ಅಣ್ಣಾಮಲೈ ಹೊಂದಿದ್ದ ಒಡನಾಟ ಅಂತ್ಯಗೊಂಡಿದೆ ಎಂದು ಬಿಜೆಪಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್ 2 ಮಂಗಳವಾರದಂದು ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದ ಅಣ್ಣಾಮಲೈ, ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ ಹಾಗೂ ಎಐಡಿಎಂಕೆ ಜೊತೆಗಿನ ಮೈತ್ರಿಯಿಂದಾಗಿ ತಮಿಳುನಾಡಿನಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬುದು ಅವರ ಬೇಸರಕ್ಕೆ ಕಾರಣ ಎನ್ನಲಾಗಿದೆ.

- Advertisement -

Latest News

error: Content is protected !!