Monday, May 6, 2024
Homeತಾಜಾ ಸುದ್ದಿಮೊದಲ ಬಾರಿ ಡಾಲಿ ಧನಂಜಯ್ ನ ಹರಿಪ್ರಿಯಾ ಭೇಟಿಯಾಗಿದ್ದು ಎಲ್ಲಿ ? ಸಿಕ್ಕಾಗ ಏನ್ತಾಯ್ತು? ನಟಿ...

ಮೊದಲ ಬಾರಿ ಡಾಲಿ ಧನಂಜಯ್ ನ ಹರಿಪ್ರಿಯಾ ಭೇಟಿಯಾಗಿದ್ದು ಎಲ್ಲಿ ? ಸಿಕ್ಕಾಗ ಏನ್ತಾಯ್ತು? ನಟಿ ಬಿಚ್ಚಿಟ್ಟ ಅಸಲಿ ಕಥೆ…!

spot_img
- Advertisement -
- Advertisement -

ಸ್ಯಾಂಡಲ್​ವುಡ್ ಸುಂದರಿ ನಟಿ ಹರಿಪ್ರಿಯಾ ಇತ್ತೀಚೆಗೆ ತಮ್ಮ ಬ್ಲಾಗ್​ನಲ್ಲಿ ಸಕ್ರೀಯರಾಗಿದ್ದಾರೆ. ಕೆಲ ದಿನಗಳ ಹಿಂದೆ ಚಿರಂಜೀವಿ ಅಗಲಿಕೆ ಕುರಿತಾದ ಮನಮುಟ್ಟುವ ಬರಹವೊಂದನ್ನು ಪ್ರಕಟಿಸಿದ್ದರು. ಇದೀಗ ನಟ ಭಯಂಕರ ಡಾಲಿ ಧನಂಜಯ್ ಅವರನ್ನು ಎಲ್ಲಿ, ಯಾವಾಗ, ಹೇಗೆ ಭೇಟಿಯಾಗಿದ್ದು ಎಂಬ ಪ್ರಸಂಗವನ್ನು ಬಿಚ್ಚಿಟ್ಟಿದ್ದಾರೆ. ಅದರೊಂದಿಗೆ ಡಾಲಿಯ ಲಾಕ್​ಡೌನ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ತುಂಬಾ ದಿನ ಆದ್ಮೇಲೆ ನನ್ನ ಹಳೇ ಹಾರ್ಡ್‌ಡಿಸ್ಕ್‌ನಲ್ಲಿ ಬ್ಲಾಗ್ ಗೋಸ್ಕರ ಫೋಟೋಗಳು ಹುಡುಕುತ್ತಿದ್ದೆ. ಅದ್ರಲ್ಲಿ ಫ್ರೆಂಡ್ಸ್, ಫ್ಯಾಮಿಲಿ, ಪೆಟ್ಸ್, ಟ್ರಾವೆಲ್ ಅಂತೆಲ್ಲ ಪೋಲ್ಡರ್ಸ್ ಮಾಡಿದಿನಿ. ಫ್ರೆಂಡ್ಸ್ ಫೋಲ್ಡರ್ ನೋಡುವಾಗ, ಎ ಆರ್.ರೆಹಮಾನ್ ಕನ್ಸರ್ಟ್‌ಗೆ ಹೋಗಿದ್ದ ಫೋಟೋಸ್ ಸಿಕ್ಕಿದ್ವು. ನಮ್ ಬೆಂಗಳೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದಿತ್ತು. ನನ್ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಎಲ್ರೂ ಹೋಗಿದ್ವಿ, ನನ್ ಫ್ರೆಂಡ್, ಅವ್ರ ಫ್ರೆಂಡ್ ಜೊತೆ ಬಂದಿದ್ರು. ಯಾರ್ ಇದು ಇಷ್ಟೊಂದು ದಾಡಿ ಬಿಟ್ಟಿದ್ದಾರೆ ಅನ್ಕೊಂಡು ಕೇಳ್ದೆ.

ಮೂವಿಗೋಸ್ಕರ. ಇವ್ರು ಥಿಯೇಟರಿಂದ ಸಿನಿಮಾಗೆ ಬಂದಿದಾರೆ, ಹಾಗೇ ತುಂಬಾ ಪ್ಯಾಷನೇಟ್ ಅಂತ ಗೊತ್ತಾಯಿತು. ಅವ್ರು ಯಾರು ಅಂದ್ರೆ ನಮ್ ಡಾಲಿ ಧನಂಜಯ್. ಯೆಸ್.. ನಾನು ಫಸ್ಟ್ ಧನಂಜಯನ ಮೀಟ್ ಮಾಡಿದ್ದು ಅಲ್ಲೇ.. ಕನ್ಸರ್ಟ್ ಅಲ್ವಾ.. ಎಲ್ರೂ ಕೂಗ್ತಾ, ಹಾಡ್ತಾ ಇದ್ವಿ. ನಮ್ ಮಾತು ನಮ್ಗೇ ಕೇಳಿಸ್ತಿರ್ಲಿಲ್ಲ. ಸೋ ಆವತ್ತು ಮಾತಾಡಿದ್ದು ಅಷ್ಟೇ ಅನ್ಸುತ್ತೆ!

ಆಮೇಲೆ ಒಂದಿನ ಇಂಡಸ್ಟ್ರಿ ಇವೆಂಟ್‌ನಲ್ಲಿ ಸಿಕ್ದಾಗ, ಗುರುತು ಹಿಡಿಯೋದು ಸ್ವಲ್ಪ ಕಷ್ಟ ಆಯ್ತು. ಯಾಕಂದ್ರೆ ಕ್ಲೀನ್ ಶೇವಲ್ಲಿದ್ರು (ಚೆನ್ನಾಗ್ ಕಾಣಿಸ್ತಿದ್ರು ಅನ್ನಿ). ನಾವು ಯಾವುದೇ ಫುಲ್ ಸಿನಿಮಾದಲ್ಲಿ ಒಟ್ಟಿಗೆ ಆ್ಯಕ್ಟ್ ಮಾಡಿಲ್ಲ ಆದ್ರೂ ‘ಲೈಫ್ ಜೊತೆ ಒಂದ್ ಸೆಲ್ಫಿ’ ಅನ್ನೋ ಸಿನಿಮಾದಲ್ಲಿ ಸ್ವಲ್ಪ ದಿನ ಒಟ್ಟಿಗೆ ಆ್ಯಕ್ಟ್ ಮಾಡಿದ್ವಿ‌. ಶೂಟ್ ನಡುವೆ ಮುಂದಿನ ಸಿನಿಮಾಗಳ ಬಗ್ಗೆ, ಊರಿನ ಬಗ್ಗೆ ಮಾತಾಡ್ತಿದ್ವಿ. ಮುಖ್ಯವಾಗಿ ಅವ್ರ ಊರು ಹಾಸನ, ಅರಸೀಕೆರೆ ಅಂತ ಹೇಳಿದಾಗ ಖುಷಿ ಆಯಿತು. ಯಾಕಂದ್ರೆ ನಂಗೆ ಕಾಡು, ಹಳ್ಳಿ, ಪರಿಸರ ಎಲ್ಲಾ ತುಂಬಾ ಖುಷಿ ಕೊಡೋ ವಿಷಯಗಳು.

ಈ ಎರಡು ತಿಂಗಳು ನಾವೆಲ್ಲ ಇಲ್ಲೇ ಸಿಟಿಯಲ್ಲೇ ಕೂಡಾಕಿಕೊಂಡು ಇದೀವಿ, ivru ಹಳ್ಳಿಗೇನಾದ್ರೂ ಹೋಗಿದ್ರಾ? ಈಗ ಆ್ಯಕ್ಟರ್, ಪ್ರೊಡ್ಯೂಸರ್ ಆ್ಯಂಡ್ ರೈಟರ್ ಎಲ್ಲ (ನನ್ನ ‘D/O ಪಾರ್ವತಮ್ಮ’ ಸಿನೆಮಾ ಗು ಸಾಂಗ್ ಲಿರಿಕ್ಸ್ ಬರೆದಿದ್ರು) ಬಿಡುವಲ್ಲಿ ಬರೀತಿದ್ರ, ಓದುತ್ತಿದ್ರ, ಅಥವಾ ಏನೇನ್ ಮಾಡಿದ್ರು ಅಂತ ತಿಳ್ಕೋಳಕೆ ಫೋನ್ ಮಾಡ್ದೆ.

“ಹೆಲೋ ಹೀರೋ.. ಹೇಗಿದೀರ, ಏನ್ ಮಾಡ್ತಿದೀರ?”

“ಹೆಲೋ ಹೀರೋಯಿನ್.. ಚನ್ನಾಗಿದೀನಿ, ನೀವು ನಿಮ್ಮ Babeknows.com ಗೆ ಬರಿಯೋದ್ರಲ್ಲಿ ಫುಲ್ ಬ್ಯುಸಿನಾ ?” ಅಂತ ಅಂದ್ರು.

“ಹೌದು.. ಫುಲ್‌ಟೈಮ್ ಬರಿತಿದೀನಿ. ಬ್ಲಾಗ್‌ಗೆ ಫೋಟೋಸ್ ಹುಡುಕೋವಾಗ್ಲೇ, ನಾವು ಹೋಗಿದ್ದ ರೆಹಮಾನ್ ಕನ್ಸರ್ಟ್ ಫೋಟೋಸ್ ಸಿಕ್ತು. ಹಾಗೆ ನೆನಪಾಗಿ ಮಾತಾಡಣ ಅಂತ ಕಾಲ್ ಮಾಡ್ದೆ. ಎಲ್ಲಿದೀರಾ? ಊರಿಗೆ ಹೋಗಿದ್ರಾ? ಅಂದೆ.

“ಓಹ್.. ಹೌದಾ? ಫೋಟೋಸ್ ನಂಗೂ ಕಳ್ಸಿ. ಹು, ಪರ್ಮಿಷನ್ ಸಿಕ್ಕಿದ್ಮೇಲೇನೆ ಸ್ವಲ್ಪ ದಿನಕ್ಕೆ ಊರಿಗೆ ಹೋಗಿದ್ದೆ, ಆದ್ರೆ ಯಾಕ್ ಸುಮ್ನೆ ಆರಾಮಾಗ್ ಹಳ್ಳಿಯಲ್ ಇರೋರಿಗೆ ತೊಂದ್ರೆ ಕೊಡೋದು ಅಂತ ವಾಪಸ್ ಬಂದ್ಬಿಟ್ಟೆ” ಅಂದ್ರು.

ಹಳ್ಳಿಯಲ್ಲಿ, ತೋಟದಲ್ಲಿ, ತಂಪಾದ ಗಾಳೀಲಿ ತಿರುಗಾಡ್ಕೊಂಡು, ತೆಂಗಿನ ಮರಗಳನ್ನು ಸುತ್ತಾಡ್ಕೊಂಡು ಇದ್ರಂತೆ. ಮಾವಿನ ಹಣ್ಣು, ಹಲಸಿನ ಹಣ್ಣು ಎಲ್ಲ ಚೆನ್ನಾಗ್ ತಿಂದ್ರಂತೆ.

ನಿಮಗ್ ಗೊತ್ತಾ? ಹಲಸು ಅಂದ್ರೆ ನಂಗೆ ಪ್ರಾಣ. ಹೇಳೋಕಾಗಲ್ಲ.‌. ಅಷ್ಟು ಇಷ್ಟ. ಮೊನ್ನೆ ನಮ್ಮನೇಲಿ ಕೂಡ ಅಣ್ಣ ಫುಲ್ ಹಣ್ಣು ತಂದು ಕಟ್ ಮಾಡ್ದ. ಜೇನುತುಪ್ಪ ಜೊತೆ ತಿನ್ನೋದೇ ಮಜಾ.

ಸಿಟಿಗೆ ವಾಪಸ್ ಬಂದ್ಮೇಲೆ ಬರೀ ವರ್ಕೌಟು, ನಿದ್ರೆ ಮಾಡೋದು, ಸಿನಿಮಾ ನೋಡೋದೇ ಆಗಿದೆ ಅಂತೆ. “ಆದ್ರೆ.. ಮನೇಲಿ ನೋಡೋಕೂ ಥಿಯೇಟರ್ ಒಳಗೆ ಸಿನಿಮಾ ನೋಡೋಕೂ ತುಂಬಾ ವ್ಯತ್ಯಾಸ ಇದೆ. ಥಿಯೇಟರ್ ಗೆ ಹೋಗೋದು ಮಿಸ್ ಮಾಡ್ಕೋತಿದೀನಿ. ಥಿಯೇಟರ್ ಓಪನ್ ಆದ್ರೆ ಫಸ್ಟ್ ಹೋಗಿ ಸಿನಿಮಾ ನೋಡೋನು ನಾನೇ ಆಗಿರ್ತೀನಿ ಅಂದ್ರು”. ನಂಗೂ ಅದೇ ಫೀಲಿಂಗ್, ಆದ್ರೆ ಹುಷಾರು.. ನಾವಿನ್ನೂ ತುಂಬಾ ಸಿನಿಮಾ ಮಾಡ್ಬೇಕು, ಜೊತೇಲೂ ಸಿನಿಮಾ ಮಾಡ್ಬೇಕು, ಸೇಫ್ ಆಗಿರಿ ಅಂತ ಟಾಟಾ, ಬೈ, ಬೈ, ಹೇಳ್ಕೊಂಡ್ವಿ.

ನಂಗೂ ಅಜ್ಜಿ, ತಾತಾ ಯಾರಾದ್ರೂ ಹಳ್ಳಿಯಲ್ಲಿ ಇದ್ದಿದ್ರೆ ರಜಾದಿನಗಳಲ್ಲಿ ಆದ್ರೂ ಅಲ್ಲಿಗ್ ಹೋಗಿ ತಿರುಗಾಡ್ಕೊಂಡ್ ಪರಿಸರದ ಜೊತೆ ಇರ್ಬೋದಿತ್ತು ಅನ್ಸುತ್ತೆ. ನಮ್ ಡಾಲಿ ಥರ ನೀವು ಎಷ್ಟೋ ಜನ ಲಕ್ಕಿ ಇರ್ತೀರಿ ಅಲ್ವಾ‌.

ಧನಂಜಯ್ ನಂಗೆ ಗೊತ್ತಿರೋ ಹಾಗೆ ಸ್ವಲ್ಪ ಶೈ ಪರ್ಸನ್. ಆದ್ರೆ ತೆರೆ ಮೇಲೆ ಗೊತ್ತಲ್ವಾ? ಹೀರೋ ಆದ್ರೂ, ವಿಲನ್ ಆದ್ರೂ, ಎಲ್ಲ ಪಾತ್ರಗಳಿಗೂ ನ್ಯಾಯ ಕೊಡ್ತಾರೆ. ಸಾಕಷ್ಟು ವಿಭಿನ್ನ‌ ಪಾತ್ರಗಳನ್ನು ಮಾಡ್ತ, ಸ್ಟ್ರಾಂಗ್ ಫ್ಯಾನ್‌ಬೇಸ್ ಕ್ರಿಯೇಟ್ ಮಾಡ್ಕೊಂಡಿದಾರೆ. ಅವ್ರ ಪಾತ್ರಗಳ ಆಯ್ಕೆ ನೋಡ್ದಾಗ ನಂಗೂ ತುಂಬಾ ಖುಷಿ ಆಗುತ್ತೆ. ಮುಂದಿನ ದಿನಗಳಿಗೆ ಆಲ್ ದಿ ಬೆಸ್ಟ್, ಒಳ್ಳೇದಾಗ್ಲಿ ಧನು ?
-ಹರಿಪ್ರಿಯಾ

- Advertisement -
spot_img

Latest News

error: Content is protected !!