Wednesday, June 3, 2026
Homeಕರಾವಳಿಗುರುವಾಯನಕೆರೆ: ಹಿರಿಯ ಉದ್ಯಮಿ, ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ಜಿ.ಎ ಶೇಕಬ್ಬ ನಿಧನ

ಗುರುವಾಯನಕೆರೆ: ಹಿರಿಯ ಉದ್ಯಮಿ, ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ಜಿ.ಎ ಶೇಕಬ್ಬ ನಿಧನ

- Advertisement -
- Advertisement -

ಗುರುವಾಯನಕೆರೆ: ಹಿರಿಯ ಉದ್ಯಮಿ, ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ಜಿ.ಎ ಶೇಕಬ್ಬ (ಶೇಖ್ ಗುರುವಾಯನಕೆರೆ) ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರಿಗೆ 54 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಮನೆಯಲ್ಲೇ ಕುಸಿದು ಬಿದ್ದು ಗಾಯಗೊಂಡಿದ್ದ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.

ಗುರುವಾಯನಕೆರೆ ಪೇಟೆಯ ನಿವಾಸಿಯಾಗಿದ್ದ ಅವರು, ಅಲ್ಲೇ ಕಚೇರಿ ಹೊಂದಿದ್ದು ರಿಯಲ್ ಎಸ್ಟೇಟ್ ಉದ್ಯಮ, ವಾಹನ ಖರೀದಿ -ಮಾರಾಟ ವ್ಯವಹಾರ, ನ್ಯಾಯ ಪಂಚಾತಿಕೆಗಳನ್ನು ಮಾಡುವ ಮೂಲಕ ಪ್ರಸಿದ್ದಿ ಪಡೆದಿದ್ದರು.

ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಉರೂಸ್ ಕಮಿಟಿ ಮತ್ತು ಜಮಾಅತ್ ಕಮಿಟಿಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಇನ್ನೂ ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ಸದಾ ಮುಂಚೂಣಿ ನಾಯಕತ್ವ ವಹಿಸುತ್ತಿದ್ದರು.

- Advertisement -

Latest News

error: Content is protected !!