Saturday, June 27, 2026
Homeತಾಜಾ ಸುದ್ದಿBREAKING NEWS: ಹರತಾಳು ಹಾಲಪ್ಪ ಧರ್ಮಸ್ಥಳ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಿ ವಾಪಸ್- ಮಾಜಿ‌ ಕಾಂಗ್ರೆಸ್...

BREAKING NEWS: ಹರತಾಳು ಹಾಲಪ್ಪ ಧರ್ಮಸ್ಥಳ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಿ ವಾಪಸ್- ಮಾಜಿ‌ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಧರ್ಮಸ್ಥಳಕ್ಕೆ ಬರುವ ಸಾಧ್ಯತೆ

- Advertisement -
- Advertisement -

ಶಾಸಕ ಹಾಲಪ್ಪ ಮತ್ತು ಬೆಂಬಲಗರಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಪ್ರಮಾಣಾ ಮಾಡಿ ನಂತರ ಧರ್ಮಾಧಿಕಾರಿಯನ್ನು ಭೇಟಿ ಮಾಡಿ ವಾಪಸ್ ತೆರಳಿದ್ದಾರೆ.

ನಾನಾಗಲಿ, ನಮ್ಮ ಮನೆಯವರಾಗಲಿ ಮರಳು ಗಣಿಗಾರಿಕೆ ಮಾಡುವವರಿಂದ, ಮರಳು ಲಾರಿಯವರಿಂದ ಹಣ ಪಡೆದಿಲ್ಲ. ಈ ಬಗ್ಗೆ ನಾನು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ. ನಾನು ಮರಳಿನವರಿಂದ ಹಣ ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಫೆಬ್ರವರಿ 12 ರಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದರು ಅದೇ ರೀತಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಪ್ರಮಾಣ ಮಾಡಿ ವಾಪಸ್ ಆಗಿದ್ದಾರೆ.

ನಾನು ಹಣ ತೆಗೆದುಕೊಂಡಿದ್ದೇನೆ ಎಂದು ಆರೋಪ ಮಾಡಿರುವ ಬೇಳೂರು ಗೋಪಾಲಕೃಷ್ಣ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಬೇಕು ಎಂದು ಸವಾಲು ಹಾಕಿದ್ದಾರೆ.‌ ಅದೇ ರೀತಿ ಮಾಜಿ‌ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಧರ್ಮಸ್ಥಳಕ್ಕೆ ಬರುವ ಸಾಧ್ಯತೆ ಇದೆ.

- Advertisement -

Latest News

error: Content is protected !!