Monday, April 29, 2024
HomeUncategorizedಮಂಗಳೂರು: ಕೋವಿಡ್ 3 ನೇ ಅಲೆಯನ್ನು ತಡೆಯಲು ಪಾಲಿಕೆಯಿಂದ ಮಾರ್ಗಸೂಚಿ ಬಿಡುಗಡೆ..

ಮಂಗಳೂರು: ಕೋವಿಡ್ 3 ನೇ ಅಲೆಯನ್ನು ತಡೆಯಲು ಪಾಲಿಕೆಯಿಂದ ಮಾರ್ಗಸೂಚಿ ಬಿಡುಗಡೆ..

spot_img
- Advertisement -
- Advertisement -

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 3 ನೇ ಅಲೆಯ ಭೀತಿಯನ್ನು ಸಮರ್ಪಕವಾಗಿ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗೃತಿ ಕ್ರಮಗಳ ಕುರಿತು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮೆಡಿಕಲ್, ಡೆಂಟಲ್, ಇಂಜಿನಿಯರಿಂಗ್ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರೊಂದಿಗೆ ಇಂದು ಸಭೆ ನಡೆಯಿತು.

ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿದ್ದು ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಸಭೆಯಲ್ಲಿ ಮಹಾನಗರಪಾಲಿಕೆಯ ಉಪ ಆಯುಕ್ತರು ಅಜಿತ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಕಿಶೋರ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ|| ಅಶೋಕ್, ಹಾಗೂ ಪಾಲಿಕೆಯ ಆರೋಗ್ಯಾಧಿಕಾರಿ ಡಾ|| ಮಂಜಯ್ಯ ಶೆಟ್ಟಿ ಹಾಗೂ ಪಾಲಿಕೆಯ ಕೋವಿಡ್ ಮತ್ತು ಮಲೇರಿಯಾ ನೋಡಲ್ ಅಧಿಕಾರಿ ಡಾ|| ಅಣ್ಣಯ, ಕುಲಾಲ್, ಡಿ.ಎಸ್.ಒ ಡಾ|| ಕೆ. ಜಗದೀಶ್ ಮತ್ತು ವಿವಿಧ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

  • ಮಂಗಳೂರು ನಗರಕ್ಕೆ ಪ್ರವೇಶಿಸುವ ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಟೆಸ್ಟನ್ನು ಮಾಡತಕ್ಕದ್ದು.
  • ಶಾಲಾ ಕಾಲೇಜುಗಳಲ್ಲಿ ಪ್ರಸ್ತುತ ಜರಗುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು 2 ತಿಂಗಳವರೆಗೆ ಮುಂದೂಡಬೇಕು.
  • ಕಾಲೇಜುಗಳಲ್ಲಿ ಜರಗುವ ವಿವಿಧ ಕಾರ್ಯಾಗಾರ, ಸಮ್ಮೇಳನ ಹಾಗೂ ವಿಚಾರ ಗೋಷ್ಠಿಯನ್ನು ವರ್ಚುವಲ್ ಮೋಡ್ ಮುಖಾಂತರ ನಡೆಸಬೇಕು.
  • ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಒಂದನೇ ಮತ್ತು ಎರಡನೇ ಡೋಸ್ ಕೊರೋನಾ ನಿಯಂತ್ರಣ ಲಸಿಕೆಯನ್ನು ಪಡೆದಿರುವ ಕುರಿತು ಖಚಿತಪಡಿಸಿಕೊಳ್ಳಬೇಕು.
  • ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವ ಸಾರ್ವಜನಿಕರು / ವಿದ್ಯಾರ್ಥಿಗಳು ಕಡ್ಡಾಯವಾಗಿ 72 ಗಂಟೆಯ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ರಿಪೋರ್ಟನ್ನು ಹಾಜರುಪಡಿಸಬೇಕು.

- Advertisement -
spot_img

Latest News

error: Content is protected !!