Sunday, May 19, 2024
Homeಇತರತಿಮ್ಮಪ್ಪನ ಭಕ್ತರಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

ತಿಮ್ಮಪ್ಪನ ಭಕ್ತರಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

spot_img
- Advertisement -
- Advertisement -

ತಿರುಪತಿ :  ದೇಶದಲ್ಲಿ ಮಾರಕ ಕೊರೋನಾ ಅಟ್ಟಹಾಸ ಹೆಚ್ಚಾಗಿರುವುದರಿಂದ, ದೇಶದ ಎಲ್ಲ ಪ್ರಮುಖ ದೇವಸ್ಥಾನಗಳನ್ನೂ ಮುಚ್ಚಲಾಗಿತ್ತು. ಆದರೆ ಇದೀಗ ಬಹುಪಾಲು ದೇವಾಲಯಗಳ ಬಾಗಿಲನ್ನು ತೆರೆಯಲಾಗಿದ್ದರೂ ಹೆಚ್ಚಿನ ಭಕ್ತರಿಗೆ ಅವಕಾಶ ನೀಡುತ್ತಿಲ್ಲ. ಅದರಂತೆ ದೇಶದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ತಿಮ್ಮಪ್ಪ ದೇವಸ್ಥಾನದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಹೆಚ್ಚಿನ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವ ಬಗ್ಗೆ ಭಾನುವಾರ ಚರ್ಚೆ ನಡೆಸಿರುವ ಟಿಟಿಡಿ, ಆನ್‌ಲೈನ್ ಟಿಕೆಟ್ ಕೋಟಾದ ಪ್ರಮಾಣವನ್ನು ಹೆಚ್ಚಿಸಿದೆ. ಇದುವರೆಗೂ ದಿನಕ್ಕೆ 6 ಸಾವಿರ ಭಕ್ತರಿಗೆ ದರ್ಶನಕ್ಕೆ ಆನ್‌ ಲೈನ್ ಟಿಕೆಟ್ ನೀಡಲಾಗುತ್ತಿತ್ತು. ಆದರೆ, ಜುಲೈ 1 ರಿಂದ ಆ ಸಂಖ್ಯೆಯನ್ನು 9 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ಪ್ರತಿದಿನ 3 ಸಾವಿರ ಸರ್ವದರ್ಶನ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಅಲ್ಲದೇ ತಿರುಪತಿ ತಿರುಮಲ ದೇವಸ್ಥಾನ ನಾಳೆಯಿಂದ 300  ರೂಪಾಯಿಗಳ ಆನ್‌ಲೈನ್ ಟಿಕೆಟ್ ನೀಡಲಿದೆ.

ತಿಮ್ಮಪ್ಪನ ದರ್ಶನಕ್ಕೆ ಬರಲು ಇಚ್ಚಿಸುವ ಭಕ್ತರು ಒಂದು ದಿನದ ಮುಂಚಿತವಾಗಿ ಈ ಟಿಕೆಟ್‌ಗಳನ್ನು ತೆಗದುಕೊಳ್ಳಬೇಕಾಗುತ್ತದೆ. ಕೊರೋನಾದಿಂದಾಗಿ ಎರಡೂವರೆ ತಿಂಗಳ ಕಾಲ ತಿರುಪತಿ ದೇವಸ್ಥಾನವನ್ನು ಮುಚ್ಚಲಾಗಿತ್ತು. ಆದರೆ ಲಾಕ್‌ಡೌನ್ ಸಡಿಲಿಕೆಯ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ಹಾಗೆಯೇ 10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರಿಗೆ ದರ್ಶನಕ್ಕೆ ಅವಕಾಶವಿಲ್ಲ ಎಂದು  ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!