Friday, June 5, 2026
Homeತಾಜಾ ಸುದ್ದಿಈಗ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ ಒಮ್ಮಿಂದೊಮ್ಮೆಲೇ ಏರಲಿದೆ!.. ಈ ಬಗ್ಗೆ ತಜ್ಞರ ಅಭಿಪ್ರಾಯವೇನು?

ಈಗ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ ಒಮ್ಮಿಂದೊಮ್ಮೆಲೇ ಏರಲಿದೆ!.. ಈ ಬಗ್ಗೆ ತಜ್ಞರ ಅಭಿಪ್ರಾಯವೇನು?

- Advertisement -
- Advertisement -

ಬೆಂಗಳೂರು: ಚಿನ್ನದ ಬೆಲೆ ದೀಪಾವಳಿ ನಂತರ ಇಳಿಕೆಯ ದಾರಿ ಹಿಡಿದಿತ್ತು. ಆದರೆ ಈಗ 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 10 ರೂ ಇಳಿಕೆಯಾಗಿ 51,380 ರೂಪಾಯಿ ಆಗಿದೆ. ಇದು ಒಂದು ವಾರದಲ್ಲಿ ದಾಖಲೆಯ ಇಳಿಕೆ ಎನ್ನಲಾಗುತ್ತಿದೆ. ದೀಪಾವಳಿ ಕೊನೆಗೊಂಡ ಮರುದಿನದಿಂದಲೇ ಚಿನ್ನದ ದರ ಇಳಿಕೆ ಕಾಣಲಾರಂಭಿಸಿತ್ತು. ಈ ಮೂಲಕ ಕಳೆದೊಂದು ವಾರದಲ್ಲಿ ಒಟ್ಟು 810 ರೂ ಇಳಿಕೆ ಕಂಡಿದೆ.

ಆದರೆ ತಜ್ಞರ ಪ್ರಕಾರ ಚಿನ್ನ ಇನ್ನೂ ಏರಿಕೆಯಾಗಲಿದೆ. ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದು, ಆಭರಣ ಪ್ರಿಯರು ಕಂಗಾಲಾಗಿದ್ದಾರೆ .ಕೊರೋನಾ ಸೋಂಕು ಹರಡುವಿಕೆ ಇಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ.ಆದರೆ ಇದು ಚಿನ್ನದ ಮೇಲೆ ಭಾರೀ ಪ್ರಭಾವ ಬೀರಿದೆ.

- Advertisement -

Latest News

error: Content is protected !!