Saturday, June 6, 2026
Homeತಾಜಾ ಸುದ್ದಿಎನ್ ಸಿಬಿ ಅಧಿಕಾರಿಗಳ ಮೇಲೆ ಹಲ್ಲೆ -ಮುಂಬೈನಲ್ಲಿ ಡ್ರಗ್ ಪೆಡ್ಲರ್ಸ್ಸ್ ಗಳ ಗುಂಡಾಗಿರಿ!..

ಎನ್ ಸಿಬಿ ಅಧಿಕಾರಿಗಳ ಮೇಲೆ ಹಲ್ಲೆ -ಮುಂಬೈನಲ್ಲಿ ಡ್ರಗ್ ಪೆಡ್ಲರ್ಸ್ಸ್ ಗಳ ಗುಂಡಾಗಿರಿ!..

- Advertisement -
- Advertisement -

ಮುಂಬೈ:ಮಾದಕ ವಸ್ತು ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ಎನ್ ಸಿಬಿ ತನ್ನ ಕಾರ್ಯ ಚಟುವಟಿಕೆ ತೀವ್ರ ಗೊಳಿಸಿದೆ.ಇಂದು ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಮತ್ತು ಐವರು ಅಧಿಕಾರಿಗಳ ಮೇಲೆ ಡ್ರಗ್ ಪೆಡ್ಲರ್ಸ್ಸ್ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಸರಿಸುಮಾರು 60 ಜನರ ಗುಂಪೊಂದು ಹಲ್ಲೆ ನಡೆಸಿದ್ದು ಗಲಾಟೆ ವೇಳೆ ಎನ್ ಸಿಬಿಯ ಇಬ್ಬರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.ಈ ಘಟನೆ ಎನ್ ಸಿಬಿ ಅಧಿಕಾರಿಗಳು ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದ ಕ್ಯಾರಿ ಮಾಂಡೀಸ್ ಎಂಬಾತನನ್ನು ಬಂಧಿಸುವ ವೇಳೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸರು ಪ್ರಕರಣದಲ್ಲಿ ಕ್ಯಾರಿ ಮಾಂಡೀಸ್ ಹಾಗೂ ಇತರ ಮೂವರು ಸಹಚರರನ್ನು ಬಂಧಿಸಿ ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!