Friday, June 5, 2026
Homeತಾಜಾ ಸುದ್ದಿಒಂಬತ್ತು ಮಂದಿಯ ಪ್ರಾಣ ಉಳಿಸಿದ ಸಾಕು ನಾಯಿ!..ಇಡೀ ಕುಟುಂಬ ಆನೆದಾಳಿಯಿಂದ ತಪ್ಪಿಸಿಕೊಂಡಿದ್ದು ಹೇಗೆ?

ಒಂಬತ್ತು ಮಂದಿಯ ಪ್ರಾಣ ಉಳಿಸಿದ ಸಾಕು ನಾಯಿ!..ಇಡೀ ಕುಟುಂಬ ಆನೆದಾಳಿಯಿಂದ ತಪ್ಪಿಸಿಕೊಂಡಿದ್ದು ಹೇಗೆ?

- Advertisement -
- Advertisement -

ಮಲಪ್ಪುರಂ:ಇಲ್ಲಿನ ಎಡಕ್ಕರದಲ್ಲಿ ಉದಿರಮ್​ಕುಲಮ್​ನಲ್ಲಿರುವ ಸುಂದರನ್​ ಮನೆ ಸಮೀಪ ಒಂದೇ ಕುಟುಂಬದ ಒಂಬತ್ತು ಮಂದಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಇವರನ್ನು ರಕ್ಷಿಸಿದ್ದು ಮಾತ್ರ ಇವರ ಮನೆಯ ಸಾಕು ನಾಯಿ. ಹೌದು ಇವರ ಮನೆಯ ಸಾಕು ನಾಯಿಯ ಸಮಯ ಪ್ರಜ್ಞೆಯಿಂದ ಇಡೀ ಕುಟುಂಬ ಆನೆದಾಳಿಯಿಂದ ತಪ್ಪಿಸಿಕೊಂಡಿದೆ.

ಕರಿಯುಮುರಿಯಂ ಅರಣ್ಯ ಸಮೀಪದ ಸುಂದರನ್ ಮನೆಯ ಶೆಡ್​ ಮೇಲೆ ಭಾರಿ ಗಾತ್ರದ ಕಾಡಾನೆ ದಾಳಿ ಮಾಡಿತ್ತು. ಅದನ್ನು ನೋಡಿದ ನಾಯಿ, ಜೋರಾಗಿ ಬೊಗಳುವುದಲ್ಲದೆ, ಮನೆಯ ಪ್ಲಾಸ್ಟಿಕ್​ ಶೀಟ್​ ಕೆರೆಯುವ ಶಬ್ದ ಕೇಳಿ ಎಚ್ಚರಗೊಂಡ ಸುಂದರನ್​ ಕುಟುಂಬ ಅಲ್ಲಿಂದ ತಪ್ಪಿಸಿಕೊಂಡು ಪಾರಾಗಿದ್ದಾರೆ.ಉದ್ರಿಕ್ತ ಕಾಡಾನೆ ಸಾಕಷ್ಟು ಬೆಳೆ ಹಾನಿಯನ್ನು ಮಾಡಿ, ಶೆಡ್​ ಧ್ವಂಸಗೊಳಿಸಿದ್ದಲ್ಲದೆ ಮನೆಯೊಳಗೆ ಪ್ರವೇಶಿಸಲು ಯತ್ನಿಸಿದೆ. ಮನೆಯವರು ಜೋರಾಗಿ ಶಬ್ದ ಮಾಡಿದಾಗ ಭಯಗೊಂಡು ಕಾಡಿಗೆ ಪಲಾಯನ ಮಾಡಿದೆ.

- Advertisement -

Latest News

error: Content is protected !!