Wednesday, October 14, 2026
Homeಕರಾವಳಿಬೆಳ್ತಂಗಡಿ: ಬಾರ್ಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಪ್ರವೀಣ್ ರೈ, ಉಪಾಧ್ಯಕ್ಷರಾಗಿ ಪಾರ್ಶ್ವನಾಥ್ ಜೈನ್

ಬೆಳ್ತಂಗಡಿ: ಬಾರ್ಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಪ್ರವೀಣ್ ರೈ, ಉಪಾಧ್ಯಕ್ಷರಾಗಿ ಪಾರ್ಶ್ವನಾಥ್ ಜೈನ್

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ನ.23 ರಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಪ್ರವೀಣ್ ರೈ, ಉಪಾಧ್ಯಕ್ಷರಾಗಿ ಪಾರ್ಶ್ವನಾಥ್ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಆಯ್ಕೆಗೆ ನ.10ರಂದು ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ 12 ಕ್ಷೇತ್ರಗಳಲ್ಲಿ ಸಹಕಾರ ಭಾರತಿ ಬೆಂಬಲಿತ 12 ಮಂದಿ ಅಭ್ಯರ್ಥಿಗಳೂ ಗೆಲುವು ಸಾಧಿಸುವುದರೊಂದಿಗೆ ಸಂಘದ ಆಡಳಿತದ ಗದ್ದುಗೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರು.

ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ ಕೆ.ಆರ್, ಹಿಂದುಳಿದ ವರ್ಗ ಎ’ ಕ್ಷೇತ್ರದಿಂದ ನಿಕಟಪೂರ್ವ ಉಪಾಧ್ಯಕ್ಷ ಶೇಷಪ್ಪ ಸಾಲ್ಯಾನ್, ಸಾಮಾನ್ಯ ಕ್ಷೇತ್ರದಿಂದ ರಾಜೇಶ್ ರೈ, ಪ್ರವೀಣ್ ರೈ ಪಿ, ಪ್ರಸನ್ನ ಎನ್, ಪ್ರತಾಪ್ ಎಂ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಅಣ್ಣು ಪಿ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಶಿವರಾಮ, ಹಿಂದುಳಿದ ವರ್ಗ ಎ’ಕ್ಷೇತ್ರದಿಂದ ಅಶ್ರಫ್ ಹೆಚ್, ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ಸವಿತಾ ಮತ್ತು ಶ್ರೀಮತಿ ಲಿಡಿಯಾ ಬ್ರಾಗ್ಸ್, ಸಾಲಗಾರರಲ್ಲದ ಕ್ಷೇತ್ರದಿಂದ ಪಾರ್ಶ್ವನಾಥ ನಿರ್ದೇಶಕರಾಗಿ ಚುನಾಯಿತರಾಗಿದ್ದರು.

ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ನವೀನ್ ಕುಮಾರ್ ಎಂ.ಎಸ್ ಕಾರ್ಯನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಗೌಡ ಸಹಕರಿಸಿದರು.

- Advertisement -

Latest News

error: Content is protected !!