Thursday, May 9, 2024
Homeಕರಾವಳಿಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆರತಿ ತೆಗೆದುಕೊಳ್ಳುವಾಗ ಮಹಿಳೆಯ ಕರಿಮಣಿ ಎಗರಿಸಿದ ಕಳ್ಳರು

ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆರತಿ ತೆಗೆದುಕೊಳ್ಳುವಾಗ ಮಹಿಳೆಯ ಕರಿಮಣಿ ಎಗರಿಸಿದ ಕಳ್ಳರು

spot_img
- Advertisement -
- Advertisement -

ಸುಬ್ರಹ್ಮಣ್ಯ : ಇಷ್ಟು ದಿನ ರಸ್ತೆಯಲ್ಲಿ ಹೋಗುವ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಸರಗಳ್ಳರು ಇದೀಗ ದೇವಸ್ಥಾನದ ಒಳಗೂ ತಮ್ಮ ಕೈಚಳಕವನ್ನು ತೋರಿಸುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಪಡೆದು ಆರತಿ ತೆಗೆದುಕೊಳ್ಳುವಾಗಲೇ  ಮಹಿಳೆಯೊಬ್ಬರ 1.4 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ ಕಳ್ಳರು ಎಗರಿಸಿದ್ದಾರೆ.
ಕಡಬದ ಇಚ್ಲಂಪಾಡಿ ಬರೆಮೇಲು ಭಾರತಿ ಎಮ್ ಡಿ ರವರು ಅ.22ರಂದು ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವರ ದರ್ಶನ ಪಡೆದು ಆರತಿ ತೆಗೆದುಕೊಳ್ಳುವ ಸಮಯ ಅವರ ಕುತ್ತಿಗೆಯಲ್ಲಿದ್ದ 4 ಪವನ್ ತೂಕದ ಕರಿಮಣಿ ಸರ ನಾಪತ್ತೆಯಾಗಿತ್ತು.
ದೇಗುಲದ ವಠಾರದಲ್ಲಿ ಹುಟುಕಾಟ ನಡೆಸಿದರೂ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು ಚಿನ್ನದ ಕರಿಮಣಿಯ ಅಂದಾಜು ಮೌಲ್ಯ 1.4 ಲಕ್ಷ ರೂ.ಎಂದು ಸುಬ್ರಹ್ಮಣ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅ.ಕ್ರ ನಂಬ್ರ : 75-2023 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

- Advertisement -
spot_img

Latest News

error: Content is protected !!