Thursday, May 2, 2024
Homeಪ್ರಮುಖ-ಸುದ್ದಿ200 ಯುನಿಟ್ ಗೃಹಜ್ಯೋತಿ ಯೋಜನೆಯ ವಿಸ್ತರಣೆ: ರಾಜ್ಯದ ಬಡ ದೇವಸ್ಥಾನಗಳಿಗೂ ಲಭ್ಯವಾಗಲಿದೆ ಈ ಯೋಜನೆ

200 ಯುನಿಟ್ ಗೃಹಜ್ಯೋತಿ ಯೋಜನೆಯ ವಿಸ್ತರಣೆ: ರಾಜ್ಯದ ಬಡ ದೇವಸ್ಥಾನಗಳಿಗೂ ಲಭ್ಯವಾಗಲಿದೆ ಈ ಯೋಜನೆ

spot_img
- Advertisement -
- Advertisement -

ಸರಕಾರದ ಹೊಸ ಯೋಜನೆ ಅನ್ವಯ ರಾಜ್ಯದಲ್ಲಿ ಈಗಾಗಲೇ ಫಲಾನುಭವಿಗಳಿಗೆ ಉಚಿತವಾಗಿ ದೊರೆಯುತ್ತಿರುವ 200 ಯುನಿಟ್ ವಿದ್ಯುತ್, ಮುಂದಿನ ದಿನಗಳಲ್ಲಿ ‘ಸಿ’ ಗ್ರೇಡ್ ನ ಬಡ ದೇವಸ್ಥಾನಗಳಿಗೂ ವಿಸ್ತರಣೆಯಾಗಲಿದೆ ಎಂದು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಯಾವ ದೇವಾಲಯವು 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಪಡೆಯುತ್ತಿದೆಯೋ, ಆ ದೇವಾಲಯವು ಈ ಯೋಜನೆಗೆ ಒಳಗಾಗುತ್ತದೆ. ಅಂದಾಜಿನಂತೆ 34,700 ದೇಗುಲಗಳು ಇದರ ಪ್ರಯೋಜನ ಪಡೆದುಕೊಳ್ಳಲಿದೆ ಎನ್ನಲಾಗಿದೆ. ಇಲಾಖೆಯ ವ್ಯಾಪ್ತಿಯಲ್ಲಿ ‘ಎ’ ಗ್ರೇಡ್‌ನ 175, ‘ಬಿ’ ಗ್ರೇಡ್‌ನ 330 ಮತ್ತು ‘ಸಿ’ ಗ್ರೇಡ್‌ನ 34,700 ದೇವಸ್ಥಾನಗಳಿವೆ. ವಾರ್ಷಿಕವಾಗಿ ದೇವಾಲಯದ ಆದಾಯ 25 ಲಕ್ಷ ರೂಪಾಯಿಗೂ ಅಧಿಕವಾಗಿದ್ದರೆ, ಮೂಲಸೌಕರ್ಯ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸ್ಥಳೀಯ ಹಂತದಲ್ಲೇ ಅವಕಾಶಗಳಿವೆ. ಆದರೆ, 1 ರಿಂದ 5 ಲಕ್ಷ ರೂ. ಒಳಗೆ ಆದಾಯ ಪಡೆಯುವ ‘ಸಿ’ ಗ್ರೇಡ್ ದೇಗುಲಗಳಿಗೆ ಮಾತ್ರ ಯಾವುದೇ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನಲಾಗಿದೆ.

ಇನ್ನು ರಾಜ್ಯದಲ್ಲಿ ‘ಸಿ’ ಗ್ರೇಡ್ ದೇವಾಲಯಗಳು ಮಾಸಿಕ ವಿದ್ಯುತ್, ನೀರಿನ ವೆಚ್ಚ ಭರಿಸಲೂ ಪರದಾಡುವ ಸನ್ನಿವೇಶವಿದೆ. ಆದ್ದರಿಂದ ಪ್ರಸ್ತುತ ಚಾಲ್ತಿಯಲ್ಲಿರುವ ‘ಗೃಹಜ್ಯೋತಿ’ ಯೋಜನೆ ದೇವಸ್ಥಾನಗಳಿಗು ವಿಸ್ತರಣೆಯಾಗಲಿದೆ.

ರಾಜ್ಯದಲ್ಲಿ ಈ ಹಿಂದಿನ ಸರಕಾರಗಳು ‘ಎ’ ಗ್ರೇಡ್ ದೇವಸ್ಥಾನಗಳ ಆದಾಯದ ಶೇ.20ರಷ್ಟು ಪಾಲನ್ನು ‘ಸಿ’ ಗ್ರೇಡ್ ದೇಗುಲಗಳ ಅಭಿವೃದ್ಧಿಗೆ ನೀಡಬೇಕೆಂಬ ಯೋಜನೆಯನ್ನು ರೂಪಿಸಿದ್ದವು. ಅವರ ಯಾವ ಯೋಜನೆಯು ಬರಲಿಲ್ಲ. ದೇವಸ್ಥಾನಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ‘ಸಿ’ ಗ್ರೇಡ್ ದೇವಸ್ಥಾನಗಳಿಗೂ ಉಚಿತ ವಿದ್ಯುತ್ ಪೂರೈಸಲು ರಾಜ್ಯ ಸರಕಾರ ಮುಂದಾಗಿದೆ.

ಈ ಯೋಜನೆಯ ಕುರಿತು ಶೀಘ್ರವೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!