Thursday, May 2, 2024
Homeಕರಾವಳಿಆಟೋ ಚಾಲಕನ ಮೇಲೆ ಯುವಕರ ತಂಡದಿಂದ ಹಲ್ಲೆ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಆಟೋ ಚಾಲಕನ ಮೇಲೆ ಯುವಕರ ತಂಡದಿಂದ ಹಲ್ಲೆ; ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

spot_img
- Advertisement -
- Advertisement -

ವಿಟ್ಲ: ಇಲ್ಲಿನ ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ಆಟೋ ಚಾಲಕನನ್ನು ಹಿಂಬಾಲಿಸಿದ ಯುವಕರ ತಂಡವೊಂದು ಆತನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಆಟೋ ಚಾಲಕ ಸಾಲೆತ್ತೂರು ಮೆದು ಸಿದ್ದೀಕ್ ಎಂಬುವವರಾಗಿದ್ದು, ಈತ ಈಗಾಗಲೇ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈ ಕಾರಣಕ್ಕೆ ಯುವಕರ ತಂಡ ಈತನ ಮೇಲೆ ಹಲ್ಲೆ ಮಾಡಿದೆ ಎನ್ನುವ ವಿಚಾರ ಕೇಳಿ ಬರುತ್ತಿದೆ.

ಘಟನೆಯ ವಿವರ: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮಾದಕದ್ರವ್ಯ ಪ್ರಕರಣ ಸೇರಿದಂತೆ ಹಲವಾರು ಅಪರಾಧ ಕೃತ್ಯಗಳಲ್ಲಿ ಗುರುತಿಸಿಕೊಂಡಿದ್ದ ಸಾಲೆತ್ತೂರು ಮೆದು ಸಿದ್ದೀಕ್ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಬೆನ್ನಟ್ಟಿ ಬಂದ ತಂಡವೊಂದು ಆಟೋ ತಡೆದು ಚಾಲಕ ಸಿದ್ದೀಕ್ ಮೇಲೆ ಹಲ್ಲೆ ನಡೆಸಿ, ಆಟೋವನ್ನು ಜಖಂಗೊಳಿಸಿದ್ದಾರೆ. ನಂತರದಲ್ಲಿ ಸಿದ್ದಿಕ್ ಎಂಬಾತನನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ.

ಹತ್ತಕ್ಕೂ ಹೆಚ್ಚು ಜನರ ತಂಡ ಈ ಕೃತ್ಯ ಎಸಗಿದೆ ಎಂಬ ಮಾಹಿತಿ ಸಾರ್ವಜನಿಕ ವಲಯದಿಂದ ಲಭ್ಯವಾಗಿದೆ.

- Advertisement -
spot_img

Latest News

error: Content is protected !!