Wednesday, June 3, 2026
Homeಇತರಬೆಳ್ತಂಗಡಿ: ಜೀವನ್ಮರಣ ಹೋರಾಟದೊಂದಿಗೆ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ಹೆಣ್ಣು ಮಗಳು- ಕುಟುಂಬಕ್ಕೆ ಬೇಕಾಗಿದೆ...

ಬೆಳ್ತಂಗಡಿ: ಜೀವನ್ಮರಣ ಹೋರಾಟದೊಂದಿಗೆ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ಹೆಣ್ಣು ಮಗಳು- ಕುಟುಂಬಕ್ಕೆ ಬೇಕಾಗಿದೆ ಸಹಾಯ

- Advertisement -
- Advertisement -

ಬೆಳ್ತಂಗಡಿ: ಆ ಬಡ ಕುಟುಂಬದ ಹೆಣ್ಣು ಮಗಳು ಎಲ್ಲಾ ಮಕ್ಕಳಂತೆ ಆಡಿ ಕುಣಿಯಬೇಕಾಗಿತ್ತು. ಆದರೆ ಇಂದು ಜೀವನ್ಮರಣ ಹೋರಾಟದೊಂದಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಅಂಗಾತ ಮಲಗಿದ್ದಾಳೆ.

ಆಕೆ ಬೆಳ್ತಂಗಡಿ ಚರ್ಚ್ ಶಾಲೆಯ 7 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ವಾರಗಳ ಹಿಂದೆ ಏಕಾಏಕಿ ಅನಾರೋಗ್ಯ ಪೀಡಿತಳಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ವೈದ್ಯಕೀಯ ಹೇಳಿಕೆ ಇಡೀ ಕುಟುಂಬಕ್ಕೆ ಸಿಡಿಲು ಬಡಿದಂತಾಯಿತು. ಅರಸಿನ ಕಾಮಾಲೆ ಕಾಯಿಲೆಯಿಂದ ಮಗುವಿನ ಲಿವರ್ ಜರ್ಝರಿತಗೊಂಡಿದೆ. ಲಿವರ್ ಕಸಿ ಮಾಡಲು ಸುಮಾರು 45 ಲಕ್ಷ ಖರ್ಚು ತಗಲುತ್ತದೆ ಎಂಬ ಮಾತು ಬಡತನದ ಬೇಗೆಯಿಂದ ಬಳಲುತ್ತಿರುವ ಆ ಕುಟುಂಬಕ್ಕೆ ಶಾಕ್ ಆಗಿದೆ. ಬಾಲಕಿಯ ಆರೋಗ್ಯ ಪರಿಸ್ಥಿತಿ ಗಂಭೀರವಾಗಿ ಬಿಗಡಾಯಿಸಿದ್ದು , ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಬದ್ಯಾರ್ ನಿವಾಸಿ ವಿಲಿಯಂ ಹಾಗೂ ಅನಿತಾ ಡಿಸಿಲ್ವ ರವರ ಮಗಳು ಏಂಜಲ್ ಅನುಷಾ ಡಿಸಿಲ್ವ. ವಿಲಿಯಂ ಕೂಲಿ ಕಾರ್ಮಿಕರಾಗಿದ್ದು , ಅನಿತಾ ಡಿಸಿಲ್ವ ಗೃಹಿಣಿಯಾಗಿದ್ದಾರೆ. ಯಾವುದೇ ರೀತಿಯ ಆದಾಯವಿಲ್ಲದ ಕುಟುಂಬ ಮಗುವಿನ ಆರೋಗ್ಯಕ್ಕಾಗಿ ದಾನಿಗಳ ಸಹಾಯವನ್ನು ಎದುರು ನೋಡುತ್ತಿದೆ.

ತಮ್ಮ ಸಹಾಯ ಸಹಕಾರದ ನಿರೀಕ್ಷೆಯಲ್ಲಿ ಈ ಕುಟುಂಬ ಎದುರು ನೋಡುತ್ತಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಬೆಳ್ತಂಗಡಿ ಖಾತೆ ಸಂಖ್ಯೆ 30727150389
IFSC ಕೋಡ್ SBIN 0003356
Mob : 9591465605

- Advertisement -

Latest News

error: Content is protected !!