Saturday, May 18, 2024
Homeಕರಾವಳಿಉಡುಪಿಉಡುಪಿ: ವಸತಿ ಸಮುಚ್ಚಯದ ಬಳಿ ಸ್ಕೂಟರ್ ನಿಲ್ಲಿಸಿ ಪಾರ್ಸೆಲ್ ಕೊಟ್ಟು ಹಿಂತಿರುಗುವಷ್ಟರಲ್ಲಿ ಸ್ಕೂಟರ್ ಕಳವು

ಉಡುಪಿ: ವಸತಿ ಸಮುಚ್ಚಯದ ಬಳಿ ಸ್ಕೂಟರ್ ನಿಲ್ಲಿಸಿ ಪಾರ್ಸೆಲ್ ಕೊಟ್ಟು ಹಿಂತಿರುಗುವಷ್ಟರಲ್ಲಿ ಸ್ಕೂಟರ್ ಕಳವು

spot_img
- Advertisement -
- Advertisement -

ಉಡುಪಿ: ವಸತಿ ಸಮುಚ್ಚಯದ ಬಳಿ ಸ್ಕೂಟರ್ ನಿಲ್ಲಿಸಿ ಡೆಲಿವರಿ ಬಾಯ್ ಪಾರ್ಸೆಲ್ ಕೊಟ್ಟು ಹಿಂತಿರುಗುವಷ್ಟರಲ್ಲಿ ಕಳ್ಳನೋರ್ವ ಸ್ಕೂಟರ್ ಸಮೇತ ಅದರಲ್ಲಿದ್ದ ಪಾರ್ಸೆಲ್ ವಸ್ತುಗಳನ್ನು ಹೊತ್ತೊಯ್ದ ಘಟನೆ ನಗರದ ವಿದ್ಯೋದಯ ಹೈಸ್ಕೂಲ್‌ ಬಳಿ ಜ.31ರ ಸೋಮವಾರ ನಡೆದಿದೆ.

ಅಂಬಲಪಾಡಿಯಲ್ಲಿರುವ ಇ-ಕಾರ್ಟ್‌ ಸಂಸ್ಥೆಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಕೊಳಲಗಿರಿಯ ಗಣೇಶ (21) ತಮ್ಮ ಹೋಂಡಾ ಡಿಯೋ ಸ್ಕೂಟರ್‌ ನ್ನು ವಿದ್ಯೋದಯ ಹೈಸ್ಕೂಲ್‌ ಬಳಿ ಇರುವ ಸಾಯಿರಾಧಾ ಗೋಕುಲಧಾಮ ಅಪಾರ್ಟ್‌ಮೆಂಟ್‌ನ ಎದುರುಗಡೆ ನಿಲ್ಲಿಸಿ ಪಾರ್ಸೆಲ್‌ ಕೊಟ್ಟು ವಾಪಾಸು10:05 ಗಂಟೆಗೆ ಬಂದು ನೋಡಿದಾಗ ಅದರಲ್ಲಿದ್ದ ಸೊತ್ತುಗಳ ಸಮೇತ ಸ್ಕೂಟರ್‌ ಕಾಣೆಯಾಗಿತ್ತು. ಎಲ್ಲಾ ಕಡೆ ಹುಡುಕಿ ಪತ್ತೆಯಾಗದೆ ಇದ್ದಾಗ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿದ್ದಾರೆ.

ಸ್ಕೂಟರ್ ನಲ್ಲಿ Infinix Hot -10 play ಕಂಪೆನಿಯ ರೂ. 8,299/- ಮೌಲ್ಯದ ಮೊಬೈಲ್‌, Pigeon ಕಂಪೆನಿಯ ರೂ. 2,191/- ಮೌಲ್ಯದ ಮಿಕ್ಸರ್‌ ಗ್ರೈಂಡರ್‌ ಹಾಗೂ ಇನ್ನಿತರ ಸಣ್ಣಪುಟ್ಟ ಪಾರ್ಸೆಲ್ ಒಟ್ಟು ಮೌಲ್ಯ 20,000/- ಆಗಬಹುದು. 80,000 ಮೌಲ್ಯದ ಸ್ಕೂಟರ್‌ ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!