Wednesday, June 3, 2026
Homeಕರಾವಳಿಕಾಸರಗೋಡುಕೊಟ್ಟಾಯಂ: ಉರಗ ತಜ್ಞ ವಾವಾ ಸುರೇಶ್ ಸ್ಥಿತಿ ಗಂಭೀರ

ಕೊಟ್ಟಾಯಂ: ಉರಗ ತಜ್ಞ ವಾವಾ ಸುರೇಶ್ ಸ್ಥಿತಿ ಗಂಭೀರ

- Advertisement -
- Advertisement -

ಕೊಟ್ಟಾಯಂ: ಅನೇಕ ವಿಧದ ಹಾವುಗಳನ್ನು ಹಿಡಿದು ಅದನ್ನು ಸಂರಕ್ಷಣೆ ಮಾಡಿ ಬಾರತದ ನಂ.1 ಸ್ನೇಕ್ ಕ್ಯಾಚಾರ್ ಎಂದೇ ಕರೆಸಿಕೊಳ್ಳುವ ವಾವಾ ಸುರೇಶ್ ಅವರಿಗೆ ಹಾವು ಹಿತಿಯುವ ಸಂದರ್ಭದಲ್ಲಿ ವಿಷಪೂರಿತ ನಾಗರ ಹಾವೊಂದು ಕಚ್ಚಿ ಕೊಟ್ಟಾಯಂ ವೈದ್ಯಕಿಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಕೇರಳದ ಕೊಟ್ಟಾಯಂ ನ ಕುರಿಚಿ ಗ್ರಾಮದ ಮನೆಯೊಂದಕ್ಕೆ ಹಾವು ಸಂರಕ್ಷಣೆಗೆoದು ಹೋದ ಸುರೇಶ್ ಅವರು ಹಾವು ಹಿಡಿಯುವುದನ್ನು ವೀಕ್ಷಿಸಲು ಅಪಾರ ಜನ ಸೇರಿದ್ದರು, ಹಾವು ಹಿಡಿದು ಗೋಣಿಚೀಲಕ್ಕೆ ಹಾಕುವ ಸಂದರ್ಭದಲ್ಲಿ ಸರ್ಪವು ಅವರ ತೊಡೆಗೆ ಕಚ್ಚಿದೆ, ನಂತರ ಇಷ್ಟಾದರೂ ಬಿಡದ ಸುರೇಶ್, ತಪ್ಪಿಸಿಕೊಳ್ಳುತ್ತಿದ್ದ ನಾಗರಹಾವನ್ನು ಹಿಡಿದು ಅದನ್ನು ಬ್ಯಾಗ್ ಒಳಗೆ ಹಾಕಿ, ನಂತರ ತಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿದ್ದಾರೆ.


ಸುರೇಶ್ ಅವರು ಈಗ ವೆಂಟಿಲೇಟರ್ ಸಹಾಯದಲ್ಲಿದ್ದು, ಸ್ಥಿತಿ ಗಂಭೀರವಾಗಿದೆ, ಆದರೆ ಆರೈಕೆಯಿಂದ ಆರೋಗ್ಯವು ಸ್ವಲ್ಪ ಸುಧಾರಿಸಿದೆ ಎಂದು ವೈದ್ಯರು ಹೇಳಿಕೆ ನೀಡಿದ್ದಾರೆ.

- Advertisement -

Latest News

error: Content is protected !!