Friday, June 5, 2026
Homeತಾಜಾ ಸುದ್ದಿಎರಡು ಮಕ್ಕಳ ತಂದೆಯೊಂದಿಗೆ ಅಪ್ರಾಪ್ತೆಗೆ ಲವ್: ವಿರೋಧಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕಿ

ಎರಡು ಮಕ್ಕಳ ತಂದೆಯೊಂದಿಗೆ ಅಪ್ರಾಪ್ತೆಗೆ ಲವ್: ವಿರೋಧಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕಿ

- Advertisement -
- Advertisement -

ರಾಯಚೂರು: ಇಬ್ಬರು ಮಕ್ಕಳ ತಂದೆಯನ್ನು ಅಪ್ರಾಪ್ತ ಬಾಲಕಿಯೊಬ್ಬಳು ಪ್ರೀತಿಸಿ ಕೊನೆಗೆ ಇಬ್ಬರು ಆತ್ಮಹತ್ಯೆಗೆ ಯತ್ನಿಸಿ ಬಾಲಕಿ ಸಾವನ್ನಪ್ಪಿರುವ ಘಟನೆ  ರಾಯಚೂರಿನ ಲಿಂಗಸಗೂರು ತಾಲೂಕಿನ ಪೈದೊಡ್ಡಿ ಗ್ರಾಮ ಹೊರವಲಯದಲ್ಲಿ ನಡೆದಿದೆ.

ಇನ್ನು ಯಕರ ಯರಜಂತಿ ಗ್ರಾಮದ ನರಸಪ್ಪ ಸ್ಥಿತಿ ಗಂಭೀರವಾಗಿದ್ದು, ಜಾಲೇರದೊಡ್ಡಿಯ ಮಹಾದೇವಿ ಸಾವನ್ನಪ್ಪಿದ್ದಾಳೆ.

ಕೆಲ ತಿಂಗಳ ಹಿಂದೆ ಇವರಿಬ್ಬರೂ ಪರಾರಿಯಾಗಿದ್ದರು. ಆದರೆ ಮಹಾದೇವಿಗೆ 18 ವರ್ಷ ತುಂಬಿದ ಬಳಿಕ ವಿವಾಹ ಮಾಡಿಸುವುದಾಗಿ ಮಹಿಳಾ ಸಾಂತ್ವನ ಕೇಂದ್ರದವರು ತಿಳಿಸಿದ್ದರಂತೆ. ಆದರೆ ವಿವಾಹಿತನೊಂದಿಗೆ ಮಗಳ ಪ್ರೀತಿ ವಿಚಾರ ತಿಳಿದ ಮಹಾದೇವಿ ಪಾಲಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಇವರಿಬ್ಬರೂ ಪೈದೊಡ್ಡಿ ಗ್ರಾಮ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಕೈ ಮೇಲೆ ಒಬ್ಬರಿಗೊಬ್ಬರು ತಮ್ಮ ತಮ್ಮ ಹೆಸರುಗಳನ್ನು ಬರೆದುಕೊಂಡಿದ್ದಾರೆ. ಸದ್ಯ ನರಸಪ್ಪನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!