Thursday, June 4, 2026
Homeತಾಜಾ ಸುದ್ದಿಪ್ರತಿಭಟನೆಗೆ ಜಗ್ಗದ ಸರ್ಕಾರ: ನಾಳೆಯಿಂದ ರಸ್ತೆಗಳಿಯಲಿವೆ ಖಾಸಗಿ ಬಸ್ ಗಳು

ಪ್ರತಿಭಟನೆಗೆ ಜಗ್ಗದ ಸರ್ಕಾರ: ನಾಳೆಯಿಂದ ರಸ್ತೆಗಳಿಯಲಿವೆ ಖಾಸಗಿ ಬಸ್ ಗಳು

- Advertisement -
- Advertisement -

ಬೆಂಗಳೂರು: ಸಾರಿಗೆ ನೌಕರರು ಸರ್ಕಾರದ ಮನವಿಗೆ ಬಗ್ಗದೇ ಇರೋದರಿಂದ ಇದೀಗ ಸರ್ಕಾರ ಖಾಸಗಿ ಬಸ್ ಗಳನ್ನು ರಸ್ತೆಗೆ ಇಳಿಸೋದಕ್ಕೆ ಮುಂದಾಗಿದೆ.

ಈಗಾಗಲೇ ಬಸ್ ಗಳು ಇಲ್ಲದೇ ಪ್ರಯಾಣಿಕರು ಎರಡು ದಿನದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಹಾಗಾಗಿ ಸರ್ಕಾರ ಪರ್ಯಾಯ ಮಾರ್ಗದ ಮೊರೆ ಹೋಗಿದೆ. ಸರ್ಕಾರಿ ದರದಲ್ಲಿ ಖಾಸಗಿ ಬಸ್ ಗಳನ್ನು ಓಡಿಸೋದಕ್ಕೆ ನಿರ್ಧರಿಸಿದೆ,

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಾರಿಗೆ ನೌಕರರ ಜೊತೆ ಮಾತುಕತೆ ನಡೆಸಲು ನಿನ್ನೆಯಿಂದ ಕಾಯುತ್ತಿದ್ದೇನೆ. ಇಂದು  ರಾತ್ರಿ 12 ಗಂಟೆಯವರೆಗೂ  ನಾನು ನೌಕರರು ಹಾಗ ಸಂಘಟನೆಯವರಿಗೆ ಲಭ್ಯವಿದ್ದೇನೆ. ಬನ್ನಿ ಮಾತಾಡೋಣ ಎಂದಿದ್ದಾರೆ.  

ಅಲ್ಲದೇ ನೌಕರರು ಪಟ್ಟು ಬಿಡದೇ ಇದ್ದರೆ ಪರ್ಯಾಯ ಮಾರ್ಗ ಅನುಸರಿಸಬೇಕಾಗುತ್ತದೆ ಎಂದಿದ್ದಾರೆ. ಖಾಸಗಿ ವಾಹನಗಳನ್ನು ಬಳಸಿಕೊಂಡು ಸರ್ಕಾರಿ ದರದಲ್ಲಿ ಓಡಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿದ್ದೇವೆ ಎಂದಿದ್ದಾರೆ. ಪ್ರಯಾಣಿಕರಿಗೆ ತೊಂದರೆ ಆಗದ ರೀತಿ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.

- Advertisement -

Latest News

error: Content is protected !!