Saturday, June 6, 2026
Homeಕರಾವಳಿಶಾಲೆ ಆರಂಭದ ದಿನವೇ ವಿದ್ಯಾರ್ಥಿನಿ ಆತ್ಮಹತ್ಯೆ: ಪುತ್ತೂರಿನ ಕೆಯ್ಯೂರಿನಲ್ಲಿ ಘಟನೆ

ಶಾಲೆ ಆರಂಭದ ದಿನವೇ ವಿದ್ಯಾರ್ಥಿನಿ ಆತ್ಮಹತ್ಯೆ: ಪುತ್ತೂರಿನ ಕೆಯ್ಯೂರಿನಲ್ಲಿ ಘಟನೆ

- Advertisement -
- Advertisement -

ಪುತ್ತೂರು:  ಶಾಲೆ ಆರಂಭದ ಮೊದಲ ದಿನವೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪುತ್ತೂರಿನ ಕೆಯ್ಯೂರಿನಲ್ಲಿ ನಡೆದಿದೆ.

ನಿನ್ನೆ ಶಾಲೆಗೆಂದು ಮನೆಯಿಂದ ತೆರಳಿದ ಮಾಡಾವು ನಿವಾಸಿ ರಾಮ ಎಂಬವರ ಪುತ್ರಿ ದಿವ್ಯಾ ಮನೆ ಸಮೀಪದ ಗೇರು ತೋಪಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಪುತ್ತೂರಿನ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ 9ನೇ ತರಗತಿಯ ವಿದ್ಯಾರ್ಥಿನಿ.

ದಿವ್ಯಾ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾಳೆ. ಆದರೆ ಶಾಲೆಗೆ ಹೋಗದೇ ಮನೆಯ ಪಕ್ಕದ ಗೇರು ತೋಪಿನ ಮರವೊಂದಕ್ಕೆ ಶಾಲಾ ಸಮವಸ್ತ್ರದ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ

- Advertisement -

Latest News

error: Content is protected !!