- Advertisement -
![]()
- Advertisement -
ಬೆಂಗಳೂರು: ಲೈಂಗಿಕ ರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ಫೇಸ್ಬುಕ್ ನಕಲಿ ಖಾತೆ ತೆರೆದು ಮಹಿಳೆಯರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಕಲಿ ಖಾತೆ ಮೂಲಕ ವಂಚಕರು ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.
ಈ ಖಾತೆಯಿಂದ ನೂರಾರು ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರೆ.ವೈದ್ಯೆ ಎಂದು ಭಾವಿಸಿದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು.ಅಲ್ಲದೆ ಖಾಸಗಿ ಫೋಟೋ, ವಿಡಿಯೋ ಗೌಪ್ಯ ವಿಚಾರಗಳನ್ನು ವಂಚಕರು ಪಡೆದುಕೊಂಡಿದ್ದಾರೆ. ಫೇಸ್ಬುಕ್ ಮೆಸೆಂಜರ್ ನಲ್ಲಿ ಈ ಕೆಲಸ ನಡೆಯುತ್ತಿತ್ತು.
ಮಹಿಳೆಯರ ಬಳಿ ಕೊರೋನಾ ಕಾರಣದಿಂದ ಆಸ್ಪತ್ರೆಗೆ ಬರುವಂತಿಲ್ಲ. ಫೇಸ್ಬುಕ್ ಮೆಸೇಂಜರ್ ನಲ್ಲಿ ಮಾತ್ರ ಸಮಸ್ಯೆ ಹೇಳಿಕೊಳ್ಳಿ ಎಂದು ಹೇಳಿ ಫೋಟೋ, ವಿಡಿಯೋ ಪಡೆಯುತ್ತಿದ್ದರು.ಮಹಿಳೆಯೊಬ್ಬರು ಈ ಕುರಿತು ಪದ್ಮಿನಿ ಪ್ರಸಾದ್ ಅವರನ್ನು ಸಂಪರ್ಕಿಸಿ ವಿಷಯ ಹೇಳಿದಾಗ ಕೃತ್ಯ ಬೆಳಕಿಗೆ ಬಂದಿದೆ.
- Advertisement -


