Sunday, April 28, 2024
Homeಅಪರಾಧಬೆಳ್ತಂಗಡಿ ಮತ್ತೆ ಗಾಂಜಾ ಸಾಗಾಟ ಪ್ರಕರಣ ಪತ್ತೆ: ಗಾಂಜಾ , ಬೈಕ್ ಸಹಿತ ಓರ್ವನ ಬಂಧನ

ಬೆಳ್ತಂಗಡಿ ಮತ್ತೆ ಗಾಂಜಾ ಸಾಗಾಟ ಪ್ರಕರಣ ಪತ್ತೆ: ಗಾಂಜಾ , ಬೈಕ್ ಸಹಿತ ಓರ್ವನ ಬಂಧನ

spot_img
- Advertisement -
- Advertisement -

ಬೆಳ್ತಂಗಡಿ: ಉಪ್ಪಿನಂಗಡಿ ಕಡೆಯಿಂದ ಬೆಳ್ತಂಗಡಿ ಕಡೆಗೆ ಬೈಕ್ ನಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾ.ಪಂ ವ್ಯಾಪ್ತಿಯ ಪರಪ್ಪು ನಲ್ಲಿ ಮಧ್ಯಾಹ್ನ ರಸ್ತೆಯಲ್ಲಿ ತಪಾಸಣೆ ನಡೆಸಿದಾಗ ಸುಮಾರು ಎರಡು ಕೆ.ಜಿ ಯಷ್ಟು ಗಾಂಜಾ ಮತ್ತು ಬೈಕ್ ವಶಪಡಿಸಿಕೊಂಡಿದ್ದು ಜೊತೆಗೆ ಗಾಂಜಾ ಸಾಗಿಸುತ್ತಿದ್ದ ಪೆಡ್ಲರ್ ಓರ್ವ ನನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ:
ಇಂದು ಬೆಳ್ತಂಗಡಿ ಠಾಣಾ ಪೊಲೀಸ್‌ ಉಪ ನಿರೀಕ್ಷಕರಾದ ನಂದ ಕುಮಾರ್‌ ಮತ್ತು ಬೆಳ್ತಂಗಡಿ ಪೊಲೀಸ್‌ ವೃತ್ತ ನಿರೀಕ್ಷಕರ ಅಪರಾಧ ಪತ್ತೆ ತಂಡದ ಸಿಬ್ಬಂದಿಯವರಾದ ಅಬ್ದುಲ್‌ ಲತೀಫ್‌ , ಇಬ್ರಾಹಿಂ ಗರ್ಡಾಡಿ , ಬೆಳ್ತಂಗಡಿ ಠಾಣಾ ಸಿಬ್ಬಂದಿ ಮಾಲತೇಶ್‌ ರಾವ್‌, ಗುತ್ಯಪ್ಪ, ಚರಣ್‌ ರವರುಗಳು ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆಗೆ ಮೋಟಾರು ಸೈಕಲೊಂದನ್ನು ಅದರ ಸವಾರನು ವೇಗವಾಗಿ ಸವಾರಿ ಮಾಡಿಕೊಂಡು ಬರುತ್ತಿರುವುದನ್ನು ನೋಡಿ ನಿಲ್ಲಿಸಲು ಸೂಚಿಸಿದ್ದಾರೆ.

ರಸ್ತೆಯ ಬದಿಯಲ್ಲಿ ನಿಲ್ಲಿಸಿ ಆತನಲ್ಲಿ ಹೆಸರು ವಿಳಾಸ ಕೇಳಿದಾಗ, ಆತನು ಹೇಳದೆ ತಡವರಿಸುತ್ತಿದ್ದು, ಆತನು ತನ್ನ ಹೆಸರು ಮಹಮ್ಮದ್‌ ಶಾಫಿ, ಯಾನೇ ನೇಜಿಕಾರ್‌ ಶಾಫಿ ಪ್ರಾಯ 29 ವರ್ಷ, ತಂದೆ: ದಿ. ಹಸನಬ್ಬ, ವಾಸ: ನೇಜಿಕಾರು ಅಂಬೊಟ್ಟು ಮನೆ, ಇಳಂತಿಲ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬುದಾಗಿ ತಡವರಿಸುತ್ತಾ ಹೇಳಿದ್ದು, ಆತನು ತನ್ನ ಬೆನ್ನಿನಲ್ಲಿ ಏನೋ ವಸ್ತುವನ್ನು ತುಂಬಿಸಿದ್ದ ಬ್ಯಾಗ್‌ ಒಂದನ್ನು ಹಾಕಿಕೊಂಡಿದ್ದು, ಕೂಡಲೇ ಅದನ್ನು ಅಲ್ಲಿಂದಲೇ ತೆರೆದು ನೋಡಿದಾಗ , ಅದರಲ್ಲಿ ಖಾಕಿ ಬಣ್ಣದ ಗಮ್‌ ಟೇಪ್‌ ನಿಂದ ಕವರ್‌ ಮಾಡಿರುವ ಕಟ್ಟವೊಂದಿದ್ದು ಗಾಂಜಾದ ತರದ ಘಾಟು ವಾಸನೆ ಬರುತ್ತಿದ್ದು, ಗಾಂಜಾ ಇರುವ ಬಗ್ಗೆ ಸಂಶಯದಿಂದ ಮೋಟಾರು ಸೈಕಲ್‌ ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳುವ ಬಗ್ಗೆ ತೀರ್ಮಾನಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಕೂಲಂಕುಷವಾಗಿ ನೋಡಲಾಗಿ 2 ಕೆಜಿ 55 ಗ್ರಾಂ ಗಾಂಜಾ ಇದರ ಅಂದಾಜು ಮೌಲ್ಯ ರೂ 71,925/ ಮೌಲ್ಯ ಮತ್ತು ಮೋಟಾರು ಸೈಕಲ್‌ ನಂಬ್ರ ಕೆಎ 21 ಯು 6006ನೇ ಹೋಂಡಾ ಕಂಪೆನಿಯದ್ದಾಗಿದ್ದು, ಇದರ ಅಂದಾಜು ಮೌಲ್ಯ ರೂ 80,000/ ಆಗಬಹುದು. ಬಳಿಕ ವಶಪಡಿಸಿಕೊಂಡು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಕಳೆದ ವಾರ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸಬರಬೈಲಿನಲ್ಲಿ 1,310 ಗ್ರಾಂ ಗಾಂಜಾ ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು ಇದು ಮಾಸುವ ಮುನ್ನವೆ ಎರಡನೇ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!