Saturday, June 6, 2026
Homeಅಪರಾಧಮಂಗಳೂರು: ದುಷ್ಕರ್ಮಿಯಿಂದ ಮೂವರು ಮಹಿಳೆಯರ ಮೇಲೆ ಮಚ್ಚಿನ ದಾಳಿ, ಒಬ್ಬರು ಗಂಭೀರ

ಮಂಗಳೂರು: ದುಷ್ಕರ್ಮಿಯಿಂದ ಮೂವರು ಮಹಿಳೆಯರ ಮೇಲೆ ಮಚ್ಚಿನ ದಾಳಿ, ಒಬ್ಬರು ಗಂಭೀರ

- Advertisement -
- Advertisement -

ಮಂಗಳೂರು: ಮೂವರು ಮಹಿಳೆಯರ ಮೇಲೆ ಅಪರಿಚಿತ ದುಷ್ಕರ್ಮಿಯೋರ್ವ ತಲ್ವಾರ್ ದಾಳಿ ನಡೆಸಿದ ಘಟನೆಯೊಂದು ನಗರದ ಜೈಲ್ ಬಳಿಯ ಕರಂಗಲಪಾಡಿ ಬಳಿ ನಡೆದಿದೆ.

ಕರಂಗಲಪಾಡಿ ಬಳಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಒಳಗೆ ಈ ಘಟನೆಯು ನಡೆದಿದೆ. ಹಲ್ಲೆಗೊಳಗಾದವರನ್ನು ರೀನ, ಗುಣವತಿ, ನಿರ್ಮಲ ಎಂದು ಗುರುತಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲವಾರು ಮಾದರಿಯ ಆಯುಧದಿಂದ ಏಕಾಏಕಿಯಾಗಿ ಸಂಸ್ಥೆಯೊಳಗೆ ನುಗ್ಗಿದ ವ್ಯಕ್ತಿ ಹಲ್ಲೆ ನಡೆಸಿದ್ದು, ನಿರ್ಮಲ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರು ತಿಳಿಸಿದ್ದಾರೆ.

- Advertisement -

Latest News

error: Content is protected !!