Saturday, June 27, 2026
Homeಕರಾವಳಿಮುಡಿಪು: ದಿಢೀರ್ ಆಗಿ ರಸ್ತೆ ದಾಟಿದ ಬಾಲಕ; ಕಾರಿನಡಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಪಾರು!

ಮುಡಿಪು: ದಿಢೀರ್ ಆಗಿ ರಸ್ತೆ ದಾಟಿದ ಬಾಲಕ; ಕಾರಿನಡಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಪಾರು!

- Advertisement -
- Advertisement -

ಮುಡಿಪು: ಮುಡಿಪು ಬಳಿಯ ಇರಾ ಎಂಬಲ್ಲಿ ರಸ್ತೆ ಬದಿ ಇರುವ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬ ಧಿಡೀರ್ ಆಗಿ ರಸ್ತೆ ದಾಟಿ ಓಡುತ್ತಿದ್ದ ವೇಳೆಯಲ್ಲಿ ಕಾರಿನಡಿಗೆ ಬಿದ್ದ ಘಟನೆ ನಡೆದಿದೆ.

ಮೈಸೂರು ಮೂಲದ ಇಂಜಿನಿಯರ್ ಶಿವಾನಂದ್ ಪುತ್ರ ಮನೋಜ್ (12) ಅಪಘಾತಕ್ಕೀಡಾದ ಬಾಲಕ. ಮನೆಯಂಗಳದಿಂದ ಮನೋಜ್ ದಿಢೀರ್ ಆಗಿ ರಸ್ತೆಗಿಳಿದು ಇನ್ನೊಂದು ಬದಿಗೆ ಓಡುವಾಗ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರೊಂದು ಡಿಕ್ಕಿಯಾಗಿದೆ.

ದಿಢೀರ್ ಆಗಿ ಬಾಲಕ ಅಡ್ಡ ಬಂದಿದ್ದರಿಂದ ಕಾರು ಚಾಲಕ ತಪ್ಪಿಸಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಿ ಕಾರು ಡಿಕ್ಕಿಯಾಗಿ ಬಾಲಕ ಅಡಿಗೆ ಬಿದ್ದಿದ್ದು ರಸ್ತೆ ಬದಿಯ ಪೊದೆಯ ಮೂಲಕ ಆತನ ಮೇಲಿಂದಲೇ ಕಾರು ಹರಿದಿದೆ.

ಬಾಲಕ ಪೊದೆಯ ಎಡೆಗೆ ಬಿದ್ದ ಕಾರಣ ಪವಾಡ ಸದೃಶ್ಯವಾಗಿ ಅಪಾಯದಿಂದ ಪಾರಾಗಿದ್ದಾನೆ. ಘಟನೆಯಿಂದ ಬಾಲಕ ಮನೋಜ್ ಎಡ ಕಾಲಿಗೆ ಪೆಟ್ಟು ಬಿದ್ದಿದ್ದು,ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

- Advertisement -

Latest News

error: Content is protected !!