Sunday, June 7, 2026
Homeತಾಜಾ ಸುದ್ದಿಚಲಿಸುತ್ತಿದ್ದ ವೇಳೆಯೇ ಹೊತ್ತಿ ಉರಿದ ತಾಲೂಕು ಪಂಚಾಯ್ತಿ ಅಧ್ಯಕ್ಷರ ಕಾರು!

ಚಲಿಸುತ್ತಿದ್ದ ವೇಳೆಯೇ ಹೊತ್ತಿ ಉರಿದ ತಾಲೂಕು ಪಂಚಾಯ್ತಿ ಅಧ್ಯಕ್ಷರ ಕಾರು!

- Advertisement -
- Advertisement -

ಗದಗ: ಚಲಿಸುತ್ತಿದ್ದ ಕಾರ್​ನಲ್ಲಿ​​ ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಂಡು, ಕಾರ್ ಹೊತ್ತಿ ಉರಿದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಬಟ್ಟೂರು ಬಳಿ ನಡೆದಿದೆ.

ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿ ಅಧ್ಯಕ್ಷ ಪರಸಪ್ಪ ಇಮ್ಮಡಿ ಅವರು ಚಲಾಯಿಸುತ್ತಿದ್ದ ಡಸ್ಟರ್​ ಕಾರ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಹೊತ್ತಿ ಉರಿದಿದೆ. ಬಟ್ಟೂರಿನಿಂದ ಲಕ್ಷ್ಮೇಶ್ವರಕ್ಕೆ ಹೋಗುವ ದಾರಿ ಮಧ್ಯೆ ಏಕಾಏಕಿ ಕಾರ್ ಹೊತ್ತಿ ಉರಿದಿದೆ. ಇದನ್ನು ಕಂಡಂತ ದಾರಿ ಹೋಕರು ಕೂಡಲೇ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರನ್ನು ನಿಲ್ಲಿಸಿ, ಇಳಿದು ಹೊರ ಬಂದಿದ್ದರಿಂದಾಗಿ ಪವಾಡಸಾದೃಶ್ಯರೀತಿಯಲ್ಲಿ ಅಧ್ಯಕ್ಷ ಪರಸಪ್ಪ ಬೆಂಕಿಯಿಂದ ಪಾರಾಗಿದ್ದಾರೆ. ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Latest News

error: Content is protected !!