Monday, May 6, 2024
Homeಉದ್ಯಮಭಾರತಕ್ಕೆ ಮತ್ತೆ ಬರುವ ಮುನ್ಸೂಚನೆ ನೀಡಿದ PUBG !

ಭಾರತಕ್ಕೆ ಮತ್ತೆ ಬರುವ ಮುನ್ಸೂಚನೆ ನೀಡಿದ PUBG !

spot_img
- Advertisement -
- Advertisement -

ನವದೆಹಲಿ: ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಪಬ್‌ಜಿ (PUBG)ಮೊಬೈಲ್‌ ಗೇಮ್‌ ಮತ್ತೆ ದೇಶದಲ್ಲಿ ಕಾರ್ಯಾಚರಣೆ ಪುನರಾರಂಭಿಸುವ ಸೂಚನೆ ದೊರೆತಿದೆ. ಚೀನಾದ ಟೆನ್ಸೆಂಟ್‌ನಿಂದ ಭಾರತದಲ್ಲಿ ಪಬ್‌ಜಿ ಪ್ರಕಟಿಸುವ ಹಕ್ಕನ್ನು ಪಬ್‌ಜಿ ಕಾರ್ಪೊರೇಷನ್‌ ಹಿಂಪಡೆಯುತ್ತಿರುವುದಾಗಿ ಬ್ಲಾಗ್‌ನಲ್ಲಿ ತಿಳಿಸಿದೆ.

ಆ ಮೂಲಕ ಭಾರತದಲ್ಲಿ ಜನಪ್ರಿಯ ಗೇಮ್ ಮತ್ತೊಮ್ಮೆ ಪ್ರವೇಶ ಪಡೆಯಲು ಮುಂದಾಗಿದೆ. ಭಾರತದಲ್ಲಿ ಇದಕ್ಕೆ ಹೆಚ್ಚಿನ ಸಂಖ್ಯೆಯ ಬಳಕೆದಾರರಿದ್ದರು. ಹೀಗಾಗಿ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪಬ್​​ಜಿ ಕಾರ್ಪೊರೇಶನ್​, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಚೀನಾದ ಟೆನ್ಸೆಂಟ್​ ಗೇಮ್ಸ್ ಜತೆಗೆ ಪಾಲುದಾರಿಕೆಯನ್ನು ಬಿಟ್ಟು, ಪಬ್​ಜಿ ಗೇಮ್ಸ್​ಗೆ ಸಂಬಂಧಿಸಿದ ಸಂಪೂರ್ಣ ಹೊಣೆಗಾರಿಕೆಯನ್ನು ತಾನೇ ವಹಿಸಿಕೊಳ್ಳುತ್ತಿರುವುದಾಗಿ ಹೇಳಿದೆ.

ದಕ್ಷಿಣ ಕೊರಿಯಾದ ಪಬ್‌ಜಿ ಕಾರ್ಪೊರೇಷನ್‌ ಪ್ಲೇಯರ್‌ಅನ್‌ನೌನ್ಸ್‌ ಬ್ಯಾಟಲ್‌ಗ್ರೌಂಡ್ಸ್‌ (ಪಬ್‌ಜಿ) ಗೇಮ್‌ನ ಮಾಲೀಕತ್ವ ಹೊಂದಿದೆ. ಪಬ್‌ಜಿ ಸೇರಿದಂತೆ ಚೀನಾ ಮೂಲದ 118 ಆಯಪ್‌ಗಳನ್ನು ಭಾರತ ಸರ್ಕಾರ ಕಳೆದ ವಾರವಷ್ಟೇ ನಿಷೇಧಿಸಿದೆ. ಭಾರತ ಮತ್ತು ಚೀನಾದ ಗಡಿ ಪ್ರದೇಶಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ಸಮಯದಲ್ಲೇ ಚೀನಾ ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.

- Advertisement -
spot_img

Latest News

error: Content is protected !!