Thursday, June 4, 2026
Homeಕರಾವಳಿಬೆಳ್ತಂಗಡಿ: ಅಕ್ರಮ-ಸಕ್ರಮ ಹಕ್ಕು ಪತ್ರ 10 ದಿನಗಳ ಒಳಗಾಗಿ ನೀಡದಿದ್ದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ...

ಬೆಳ್ತಂಗಡಿ: ಅಕ್ರಮ-ಸಕ್ರಮ ಹಕ್ಕು ಪತ್ರ 10 ದಿನಗಳ ಒಳಗಾಗಿ ನೀಡದಿದ್ದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ ವಸಂತ ಬಂಗೇರ

- Advertisement -
- Advertisement -

ಬೆಳ್ತಂಗಡಿ: ನಗರದ ಪತ್ರಿಕಾ ಭವನದಲ್ಲಿ ಕಾಂಗ್ರೆಸ್ ಪಕ್ಷಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.‌ವಸಂತ ಬಂಗೇರ ‘ಅಕ್ರಮ-ಸಕ್ರಮ ಮತ್ತು 94ಸಿ ಮಂಜೂರಾದ ಹಕ್ಕು ಪತ್ರವನ್ನು 10 ದಿವಸಗಳ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಒದಗಿಸಬೇಕು ಇಲ್ಲವಾದರೆ ತಾಲೂಕು ಕಚೇರಿ ಎದುರು ತಹಶೀಲ್ದಾರ ವಿರುದ್ದ ಕಾಂಗ್ರೇಸ್ ಪಕ್ಷ ಧರಣಿ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಇನ್ನೂ ಎರಡು ವಿಷಯಗಳ ಬಗ್ಗೆ ಮಾತನಾಡಿರುವ ವಸಂತ ಬಂಗೇರ, ಎ.ಪಿ.ಎಲ್ ಪಡಿತರ ಚೀಟಿ ಸರಂಡರ್ ಮಾಡಿದ ಜನರಿಂದ ಪಡಕೊಂಡ ದಂಡದ ಹಣವನ್ನು ತಕ್ಷಣ ವಾಪಾಸು ನೀಡಬೇಕೆಂದು ಆಗ್ರಹಿಸಿದರು. ಹಾಗೆಯೆ ವರ್ಷಾನುಗಟ್ಟಲೆ ವಿಲೇವಾರಿಗೆ ಬಾಕಿ ಇರಿಸಿಕೊಂಡಿರುವ ಸಾರ್ವಜನಿಕರ ಕಡತಗಳನ್ನು ತಕ್ಷಣ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಈ‌ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ ಗೌಡ, ವಕೀಲ ಮನೋಹರ್ ಕುಮಾರ್ ಇಳಂತಿಲ, ಸಾಮಾಜಿಕ ಜಾಲತಾಣದ ಸಂಚಾಲಕ ಅನಿಲ್ ಪೈ, ಇಂಟೆಕ್ ನಗರ ಬ್ಲಾಕ್ ನ ನವೀನ್ ಗೌಡ ಉಪಸ್ಥಿತರಿದ್ದರು.

- Advertisement -

Latest News

error: Content is protected !!