Saturday, June 6, 2026
Homeಕರಾವಳಿಬೆಳ್ತಂಗಡಿ:  ಚಾಲಕನ ನಿಯಂತ್ರಣ ತಪ್ಪಿ ಉರುಳಿ‌  ಬಿದ್ದ ಹಣ್ಣು ಸಾಗಾಟದ ವಾಹನ

ಬೆಳ್ತಂಗಡಿ:  ಚಾಲಕನ ನಿಯಂತ್ರಣ ತಪ್ಪಿ ಉರುಳಿ‌  ಬಿದ್ದ ಹಣ್ಣು ಸಾಗಾಟದ ವಾಹನ

- Advertisement -
- Advertisement -

ಬೆಳ್ತಂಗಡಿ:  ಚಾರ್ಮಾಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಹಣ್ಣು ಸಾಗಾಟದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಲಾಯಿಲ ಬಳಿ ಶುಕ್ರವಾರ ಬೆಳಿಗ್ಗೆ 3 ಗಂಟೆ ಸುಮಾರಿಗೆ ನಡೆದಿದೆ.

ಚಾರ್ಮಾಡಿಯಿಂದ ಮಂಗಳೂರಿಗೆ ಹಣ್ಣು ತರಲೆಂದು ಹೊರಟಿದ್ದ ಹಣ್ಣಿನ ವ್ಯಾಪಾರದ ವಾಹನ ಲಾಯಿಲ ಗ್ರಾಮದ ಟಿಬಿ ಕ್ರಾಸ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಂಗಡಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ವಾಹನದಲ್ಲಿ ಮೂವರು ಇದ್ದು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ರಾತ್ರಿ ಬಂದ ಸ್ವಲ್ಪ  ಮಳೆಯಿಂದಾಗಿ ಈ ಘಟನೆ ನಡೆದಿದ್ದು ಅಂಗಡಿಗೂ  ಹಾನಿಯಾಗಿದೆ. ಸ್ಥಳೀಯರು  ವಾಹನ ತೆರವುಗೊಳಿಸಿ  ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

- Advertisement -

Latest News

error: Content is protected !!