Sunday, June 7, 2026
Homeಕರಾವಳಿಉಡುಪಿಉಡುಪಿ: ಮುಜರಾಯಿ ಇಲಾಖೆ ವತಿಯಿಂದ ಭಕ್ತರಿಗೆ ಉಚಿತವಾಗಿ ಕಾಶಿಯಾತ್ರೆ: ಯಾತ್ರೆ ಮಾಡುವವರ ಖಾತೆಗೆ ಜಮಾವಾಗಲಿದೆ 5000 ರೂಪಾಯಿ

ಉಡುಪಿ: ಮುಜರಾಯಿ ಇಲಾಖೆ ವತಿಯಿಂದ ಭಕ್ತರಿಗೆ ಉಚಿತವಾಗಿ ಕಾಶಿಯಾತ್ರೆ: ಯಾತ್ರೆ ಮಾಡುವವರ ಖಾತೆಗೆ ಜಮಾವಾಗಲಿದೆ 5000 ರೂಪಾಯಿ

- Advertisement -
- Advertisement -

ಉಡುಪಿ: ರಾಜ್ಯದ 30,000 ಭಕ್ತರಿಗೆ ಉಚಿತವಾಗಿ ಮುಜರಾಯಿ ಇಲಾಖೆ ವತಿಯಿಂದ ಕಾಶಿಯಾತ್ರೆ ಯೋಜನೆಯನ್ನು ಆಗಸ್ಟ್, ಶ್ರಾವಣ ಮಾಸದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಉಡುಪಿಯ ಕೋಟೆ ಮಾರಿಯಮ್ಮ ದೇವಾಲಯದ ಜೀರ್ಣೋದ್ಧಾರ ಮುಷ್ಟಿ ಕಾಣಿಕೆ ಸಮಾರಂಭದಲ್ಲಿ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬೆಂಗಳೂರಿನಿಂದ ಯಾತ್ರೆ ಹೊರಡಲಿದ್ದು, 30,000 ಭಕ್ತರಿಗೆ ಅನುಕೂಲವಾಗುತ್ತದೆ. ಒಂದು ವಾರದ ಕಾಶಿ ಯಾತ್ರೆಯಲ್ಲಿ ಅಯೋಧ್ಯ, ಕಾಶಿ, ಪ್ರಯಾಗ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಯಾತ್ರೆ ಕೈಗೊಳ್ಳುವವರ ಬ್ಯಾಂಕ್ ಖಾತೆಗೆ ಸರ್ಕಾರದ ವತಿಯಿಂದ 5000 ರೂಪಾಯಿ ಜಮಾ ಮಾಡಲಾಗುವುದು. ಅಲ್ಲದೇ, ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!