Thursday, July 16, 2026
Homeತಾಜಾ ಸುದ್ದಿಕೇರಳ: ಕೈಯಲ್ಲಿ ಲಾಂಗ್ ಹಿಡಿದಿದ್ದ ರೌಡಿಯನ್ನು ಏಕಾಂಗಿಯಾಗಿ ಎದುರಿಸಿದ ಪೊಲೀಸ್ ಅಧಿಕಾರಿ :ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಧಿಕಾರಿಯ...

ಕೇರಳ: ಕೈಯಲ್ಲಿ ಲಾಂಗ್ ಹಿಡಿದಿದ್ದ ರೌಡಿಯನ್ನು ಏಕಾಂಗಿಯಾಗಿ ಎದುರಿಸಿದ ಪೊಲೀಸ್ ಅಧಿಕಾರಿ :ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಧಿಕಾರಿಯ ದಿಟ್ಟತನದ ವಿಡಿಯೋ

- Advertisement -
- Advertisement -

ಕೇರಳ: ಕೈಯಲ್ಲಿ ಲಾಂಗ್ ಹಿಡಿದಿದ್ದ ರೌಡಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ಏಕಾಂಗಿಯಾಗಿ ಎದುರಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೇರಳದ ಕಾಯಂಕುಲಂ ಬಳಿಯ ಪಾರಾ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ವಾಹನವು ಆರೋಪಿಯ ಪಕ್ಕದಲ್ಲಿ ಬಂದು ನಿಲ್ಲುತ್ತಿದ್ದಂತೆ ಆತ ತನ್ನ ವಾಹನದಿಂದ ಮಚ್ಚು ಹಿಡಿದು ಪೊಲೀಸ್ ಅಧಿಕಾರಿಯ ಮೇಲೆ ದಾಳಿ ಮಾಡಲು ಸಜ್ಜಾಗಿದ್ದಾನೆ. ಆದಾಗ್ಯೂ, ಸಬ್ ಇನ್ಸ್ ಪೆಕ್ಟರ್ ವೀರಾವೇಶದಿಂದ ದಾಳಿಕೋರನ ವಿರುದ್ಧ ಹೋರಾಡಿದ್ದಾರೆ. ಅವನನ್ನು ನೆಲಕ್ಕೆ ಬೀಳಿಸುವ ಮೂಲಕ ಅವನನ್ನು ವಶಕ್ಕೆ ಪಡೆದಿದ್ದಾರೆ. ದಾರಿಹೋಕರು ಘಟನಾ ಸ್ಥಳಕ್ಕೆ ಧಾವಿಸಿ ಅಧಿಕಾರಿಗೆ ಸಹಾಯ ಮಾಡುತ್ತಾರೆ.

ಈ ವಿಡಿಯೋವನ್ನು ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಸ್ವಾತಿ ಲಾಕ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನಿಜವಾದ ಹೀರೋ ಹೇಗಿರುತ್ತಾರೆ. ಕೇರಳದ ಈ ಪೊಲೀಸ್ ಸಬ್ ಇನ್ಸ್ ಪೆಕ್ಟರ್‌ಗೆ ವಂದನೆಗಳು.’ ಎಂದು ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

- Advertisement -

Latest News

error: Content is protected !!