Wednesday, April 24, 2024
Homeತಾಜಾ ಸುದ್ದಿಚಲಾವಣೆಯಾಗಲ್ಲ ಎಂದು ಮನೆಯಲ್ಲಿ ರಾಶಿ ರಾಶಿಯಾಗಿ ಸಂಗ್ರಹವಾಯ್ತು 10 ರೂಪಾಯಿ ನಾಣ್ಯ : ಕೊನೆಗೆ ಅದರಿಂದಲೇ...

ಚಲಾವಣೆಯಾಗಲ್ಲ ಎಂದು ಮನೆಯಲ್ಲಿ ರಾಶಿ ರಾಶಿಯಾಗಿ ಸಂಗ್ರಹವಾಯ್ತು 10 ರೂಪಾಯಿ ನಾಣ್ಯ : ಕೊನೆಗೆ ಅದರಿಂದಲೇ ಕಾರು ಖರೀದಿಸಿದ ಯುವಕ

spot_img
- Advertisement -
- Advertisement -

ತಮಿಳುನಾಡು : ಇಲ್ಲಿನ ಧರ್ಮಪುರಿಯ ಅರೂರ್​ನಲ್ಲಿ ವ್ಯಕ್ತಿಯೊಬ್ಬ 5-6 ಚೀಲದಲ್ಲಿ 10 ರೂಪಾಯಿ ನಾಣ್ಯ ತುಂಬಿಕೊಂಡು ಕಾರ್ ಶೋ ರೂಮ್​ಗೆ ಬಂದು ಕಾರ್ ಖರೀದಿಸಿದ್ದಾನೆ.

ಅದು ಧರ್ಮಪುರಿಯಲ್ಲಿರುವ ಪ್ರಸಿದ್ಧ ಕಾರ್ ಶೋ ರೂಮ್ ಅದು. ಅಲ್ಲಿ ಕಾರ್​ ಖರೀದಿಗೆ ಬರೋರು ಚೆಕ್​ ಇಲ್ಲಾ, ಕ್ಯಾಶ್​ ಹಿಡಿದುಕೊಂಡು ಬರೋರೆ ಹೆಚ್ಚು. ಆದರೆ ವೆಟ್ರಿಯಲ್ ಅನ್ನೊ ವ್ಯಕ್ತಿ ಚೀಲಗಳಲ್ಲಿ 10 ರೂಪಾಯಿ ನಾಣ್ಯವನ್ನ ತುಂಬಿಕೊಂಡು ಬಂದಿದ್ದಾನೆ.

ಚೀಲದಲ್ಲಿರುವ 10 ರೂಪಾಯಿ ನಾಣ್ಯದ ರಾಶಿಯನ್ನ ಕಾರ್ ಶೋ ರೂಮ್ ಮಾಲೀಕರ ಮುಂದೆ ಸುರಿದಿದ್ದಾನೆ. ಕೊನೆಗೆ ತನಗೆ ಇಷ್ಟವಾದ ಕಾರ್ ಕೊಂಡುಕೊಳ್ಳಲು ಮುಂದಾಗಿದ್ದಾನೆ. ವೆಟ್ರಿಯಲ್​ ಈ ನಡೆಗೆ ಕೊಂಚ ಮಟ್ಟಿಗೆ ಕಾರ್ ಶೋ ರೂಮ್​​ನವರು ಕನ್ಫ್ಯೂಸ್​ ಆಗಿದ್ದಾರೆ. ಆದರೆ ಹೀಗೆ ಮಾಡುವುದರ ಹಿಂದೆ ಇರೋ ಅಸಲಿ ಉದ್ದೇಶ ಗೊತ್ತಾದ ಮೇಲೆ ಅವರು ಆ ನಾಣ್ಯವನ್ನ ಲೆಕ್ಕ ಹಾಕಿದ್ದಾರೆ. ಅದು 6 ಲಕ್ಷ ಮೌಲ್ಯದ 10 ರೂಪಾಯಿ ನಾಣ್ಯವಾಗಿತ್ತು.

ಅಸಲಿಗೆ ವೆಟ್ರಿಯಲ್ ತಾಯಿ ಒಂದು ಪುಟ್ಟ ಅಂಗಡಿ ನಡೆಸುತ್ತಾರೆ. ಅಂಗಡಿಗೆ ಬರುವ ಗ್ರಾಹಕರು 10 ರೂಪಾಯಿ ನಾಣ್ಯ ಕೊಟ್ಟಾಗೆಲ್ಲ ತಿರಸ್ಕರಿಸುತ್ತಿದ್ದರು. ಬ್ಯಾಂಕ್​ನವರಿಗೆ ಕೊಟ್ಟರೂ ಅವರೂ 10 ರೂಪಾಯಿ ನಾಣ್ಯ ಬೇಡ ಅಂತ ಹೇಳುತ್ತಿದ್ದರು. ಇದರಿಂದ ಮನೆಯಲ್ಲಿ ಒಂದು ರಾಶಿ 10 ರೂಪಾಯಿ ನಾಣ್ಯ ಸಂಗ್ರಹವಾಗಿದ್ದವು. ಮಕ್ಕಳು ಕೆಲವೊಮ್ಮೆ ಆ ನಾಣ್ಯಗಳನ್ನ ಆಟ ಆಡುವುದಕ್ಕೆ ಬಳಸಿಕೊಳ್ಳೊರು. ಇದೆಲ್ಲ ವೆಟ್ರಿಯಲ್ ಸೂಕ್ಷ್ಮವಾಗಿ ಗಮನಿಸಿದ್ದರು. 10 ರೂಪಾಯಿ ನಾಣ್ಯ ಚಲಾವಣೆಗೆ ಯೋಗ್ಯ ಅಂತ RBI ಹೇಳಿದೆ. ಆದರೂ ಜನರು ಇದನ್ನ ಬಳಸುವುದಕ್ಕೆ ಹಿಂಜರಿಯುತ್ತಾರೆ. ಇದೇ ಕಾರಣಕ್ಕೆ ಒಂದು ತಿಂಗಳಿನಿಂದ 10 ರೂಪಾಯಿ ನಾಣ್ಯವನ್ನ ಒಟ್ಟು ಹಾಕಿ, ಜನರಿಗೆ ಜಾಗೃತಿ ಉಂಟಾಗಲಿ ಅಂತ ಉದ್ದೇಶದಿಂದಲೇ ಕಾರ್ ಒಂದನ್ನ ಖರೀದಿಸಿದ್ದಾರೆ. ಕಾರ್ ಶೋ ರೂಮ್​ನವರು ಕೂಡಾ ವೆಟ್ರಿಯಲ್ ಅವರ ಉದ್ದೇಶ ನೋಡಿ, ಅವರು 6 ಲಕ್ಷ ರೂಪಾಯಿ ಮೌಲ್ಯದ 10 ರೂಪಾಯಿ ನಾಣ್ಯ ಇಟ್ಟುಕೊಂಡು ಅವರಿಷ್ಟದ ಕಾರ್​ನ್ನ ಅವರಿಗೆ ನೀಡಿದ್ದಾರೆ.

- Advertisement -
spot_img

Latest News

error: Content is protected !!