Sunday, April 28, 2024
Homeಕರಾವಳಿಮಂಗಳೂರು: ಯೆನಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ "ವಿಶ್ವ ಮಧುಮೇಹ ದಿನ"ದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ...!

ಮಂಗಳೂರು: ಯೆನಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ “ವಿಶ್ವ ಮಧುಮೇಹ ದಿನ”ದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ…!

spot_img
- Advertisement -
- Advertisement -

ಮಂಗಳೂರು: ನವೆಂಬರ್ 14 ಅನ್ನು ಜಾಗತಿಕವಾಗಿ ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದ್ದು. ಮಧುಮೇಹವು ಜಗತ್ತಿನಾದ್ಯಂತ ಸುಮಾರು 463 ಮಿಲಿಯ ಜನರು ಬಳಲುತ್ತಿರುವ ಕಾಯಿಲೆಯಾಗಿದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೂ ಒಂದು ಕಾರಣವಾಗಿದೆ.

ಕೋವಿಡ್-19 ಸೋಂಕಿನ ಹೆಚ್ಚಿನ ಅಪಾಯಕರ ಸಹರೋಗಗಳಲ್ಲಿ ಇದೂ ಒಂದು. 2019 ರಲ್ಲಿ 1.5 ಮಿಲಿಯ ಜನರು ಮಧುಮೇಹದಿಂದ ಸಾವನ್ನಪ್ಪಿದ್ದಾರೆ. ಮಧುಮೇಹದಿಂದ ಅದಂತಹ ಸಾವುಗಳಲ್ಲಿ 48 ರಷ್ಟು ಸಾವುಗಳು 70 ವರ್ಷಕ್ಕಿಂತ ಮೊದಲು ಸಂಭವಿಸಿವೆ, 2000 ಮತ್ತು 2016 ರ ನಡುವೆ, ಮಧುಮೇಹದಿಂದ ಅಕಾಲಿಕ ಮರಣಗಳಲ್ಲಿ (70 ವರ್ಷಕ್ಕಿಂತ ಮೊದಲು) 5% ಹೆಚ್ಚಳವಾಗಿದೆ.

ವಿಶ್ವ ಮಧುಮೇಹ ಒಕ್ಕೂಟ 2021 ರ ವಿಶ್ವ ಮಧುಮೇಹ ದಿನಾಚರಣೆಯ ಅಂತರಾಷ್ಟ್ರೀಯ ವಿಷಯವಾಗಿ ‘ಮಧುಮೇಹ ಆರೈಕೆಗೆ ತಲುಪುವಿಕೆ’ ಶೀರ್ಷಿಕೆಯನ್ನು ಪ್ರಕಟಿಸಿದೆ. ಈ ವಿಷಯಕ್ಕೆ ಅನುಗುಣವಾಗಿ ಮಂಗಳೂರು ಕೊಡಿಯಾಲ್‌ಬೈಲ್‌ನ ಯೆನೆಪೋಯ ಸೆಷಾಲಿಟಿ ಆಸ್ಪತ್ರೆ ನವೆಂಬರ್ 15 ಮತ್ತು 16 ರಂದು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಿದೆ, ಈ ಅವಧಿಯಲ್ಲಿ, ಉಚಿತ ಸೇವೆಗಳ ಜೊತೆಗೆ, ಮಧುಮೇಹ ಪ್ಯಾಕೇಜ್ ಅನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.

ರೂ. 2000/- ಮೌಲ್ಯದ ಮಧುಮೇಹ ಪ್ಯಾಕೇಜ್ ಅನ್ನು ರೂ. 1000/- ರಿಯಾಯಿತಿ ದರದಲ್ಲಿ ಪಡೆಯಬಹುದು, ಮಂಗಳೂರು ಕೊಡಿಯಾಲ್‌ಬೈಲ್‌ನ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೂಚಿಸಿದ ದಿನಾಂಕಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನವೆಂಬರ್ 15 ಮತ್ತು 16 ರಂದು – 9:00 ರಿಂದ 12:00 ರವರೆಗೆ:

  • ಉಚಿತ ವೈದ್ಯಕೀಯ ಸಲಹೆ
  • ಉಚಿತ ಜಿರ್‌ಬಿಎಸ್ ಪರೀಕ್ಷೆ
  • ಹೆಚ್‌ಬಿಎ1ಸಿ ಪರೀಕ್ಷೆ – 50% ರಿಯಾಯಿತಿ

ರೂ. 2000/- ದ ಡಯಾಬಿಟಿಕ್ ಪ್ಯಾಕೇಜ್ ರೂ. 1000/-ರಿಯಾಯಿತಿ ದರದಲ್ಲಿ ದೊರೆಯುವ ಪರೀಕ್ಷೆಗಳು:

  • ಇಸಿಜಿ
  • ಜಿರ್‌ಬಿಎಸ್ ಪರೀಕ್ಷೆ
  • ಹೆಚ್‌ಐ ಎ1ಸಿ ಪರೀಕ್ಷೆ
  • ಲಿಪಿಡ್ ಪ್ರೊಫೈಲ್
  • ಸೀರಮ್ ಕ್ರಿಯಾಟಿನಿನ್
  • ಮಧುಮೇಹ ಕಣ್ಣಿನ ತಪಾಸಣೆ
  • ಸಾಮಾನ್ಯ ವೈದ್ಯಕೀಯ ಸಲಹೆ

ನವೆಂಬರ್ 15 ರಿಂದ 22 ರವರೆಗೆ ಡಯಾಬಿಟಿಕ್ ರಿಸ್ಕ್ ಪ್ರೊಫೈಲ್ ಸ್ಟಡಿ – ರೂ. 750/- ದೊರೆಯುವ ಪರೀಕ್ಷೆಗಳು:

  • ಹೃದಯ ರಕ್ತನಾಳ ಪರೀಕ್ಷೆ
  • ಬಾಹ್ಯ ನರಮಂಡಲ ಪರೀಕ್ಷೆ (ಮಧುಮೇಹ ಕಾಲು)
  • ಸ್ವನಿಯಂತ್ರಿತ ನರಮಂಡಲ ಪರೀಕ್ಷೆ

Call : 8861219155, 7619274085, 0824-4238855

Email: [email protected]

- Advertisement -
spot_img

Latest News

error: Content is protected !!