Friday, June 5, 2026
Homeಇತರಶಿರ್ಲಾಲು: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಸೌಖ್ಯದಿಂದ ನಿಧನ...!

ಶಿರ್ಲಾಲು: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಸೌಖ್ಯದಿಂದ ನಿಧನ…!

- Advertisement -
- Advertisement -

ಶಿರ್ಲಾಲು: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಶಿರ್ಲಾಲು ಗ್ರಾಮದ ಕುರುಂಬಿಲಡ್ಕ ನಿವಾಸಿ, ಸುಂದರ ಸಾಲ್ಯಾನ್ ರವರು ಅಸೌಖ್ಯದಿಂದ ನ.13 ರಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರಗತಿಪರ ಕೃಷಿಕರಾದ ಇವರು ಅಳದಂಗಡಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸ್ಮಾಯಿ ಸಮಿತಿ ಅಧ್ಯಕ್ಷರಾಗಿ, ಶಿರ್ಲಾಲು ಗ್ರಾ.ಪಂ ಮಾಜಿ ಅಧ್ಯಕ್ಷರಾಗಿ, ಶಿರ್ಲಾಲು ಶ್ರೀ ಗುರುನಾರಾಯಣ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿ, ಶಿರ್ಲಾಲು ಬಹ್ಮ ಬೈದರ್ಕಳ ಗರಡಿಯ ಗೌರವಾಧ್ಯಕ್ಷರಾಗಿ, ಹಲವಾರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು, ಎಲ್ಲರೊಂದಿಗೂ ಆತ್ಮೀಯರಾಗಿದ್ದರು. ಅಲ್ಲದೆ ಜನಪದ ವಿದ್ವಾಂಸರಾಗಿಯೂ ಊರಿನಲ್ಲಿ ಜನಪ್ರಿಯತೆಗಳಿಸಿದರು. ಮೃತರು ಪತ್ನಿ ರಾಜಮ್ಮ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!