Sunday, April 28, 2024
Homeಕ್ರೀಡೆಕೊರೋನಾಗೆ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಬಲಿ

ಕೊರೋನಾಗೆ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಬಲಿ

spot_img
- Advertisement -
- Advertisement -

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಚೇತನ್ ಚೌಹಾಣ್ ಮೃತಪಟ್ಟಿದ್ದಾರೆ. ಕಿಡ್ನಿ ಹಾಗೂ ರಕ್ತದೊತ್ತಡ ಸಮಸ್ಯೆಗಳ ಕಾರಣದಿಂದ ಚೌಹಾಣ್ ಅವರನ್ನು ಗುರುಗ್ರಾಮದಲ್ಲಿರುವ ಮೆದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಇಂದು ಸಂಜೆ ಹೃದಯಾಘಾತದಿಂದ ಮೃತಪಟ್ಟರು ಎಂದು ತಿಳಿದುಬಂದಿದೆ..

ಉತ್ತರಪ್ರದೇಶ ಸರ್ಕಾರದ ಸಚಿವರಾಗಿದ್ದ ಚೇತನ್ ಚೌಹಾಣ್ ಅವರಿಗೆ ಜುಲೈ 12 ರಂದು ಕೊರೊನಾ ಸೋಂಕು ತಗಲಿದ್ದು ಲಖ್ನೋದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಿನಿಂದಲೂ ಅವರು ಚೇತರಿಸಿಕೊಂಡಿರಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಮೇದಾಂತ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

72ರ ಹರೆಯದ ಚೌಹಾಣ್ ಎರಡು ಬಾರಿ ಲೋಕಸಭಾ ಎಂಪಿ ಕೂಡ ಆಗಿದ್ದರು. ಟೀಮ್ ಇಂಡಿಯಾ ಪರ 1969ರಿಂದ 1978ರ ವರೆಗೆ ಆಡಿದ್ದ ಚೌಹಾಣ್, 40 ಟೆಸ್ಟ್ ಪಂದ್ಯಗಳಲ್ಲಿ 31.57ರ ಸರಾಸರಿಯಂತೆ 2084 ರನ್ ಗಳಿಸಿದ್ದಾರೆ. 7 ಏಕದಿನ ಪಂದ್ಯಗಳನ್ನೂ ಆಡಿರುವ ಚೌಹಾಣ್ 153 ರನ್ ಗಳಿಸಿದ್ದಾರೆ.

- Advertisement -
spot_img

Latest News

error: Content is protected !!