Sunday, June 7, 2026
Homeಕರಾವಳಿಉಡುಪಿಗಂಗೊಳ್ಳಿ :ಮುಗುಚಿದ ಮೀನುಗಾರಿಕಾ ದೋಣಿ;ಮೀನುಗಾರರು ಪಾರು!

ಗಂಗೊಳ್ಳಿ :ಮುಗುಚಿದ ಮೀನುಗಾರಿಕಾ ದೋಣಿ;ಮೀನುಗಾರರು ಪಾರು!

- Advertisement -
- Advertisement -

ಗಂಗೊಳ್ಳಿ:ಗಂಗೊಳ್ಳಿ ಬಂದರಿನ ಅಳಿವೆ ಬಾಗಿಲ ಬಳಿ ದೋಣಿಯೊಂದು ಮುಗುಚಿ ಬಿದ್ದ ಘಟನೆ ಭಾನುವಾರ ನಡೆದಿದ್ದು,ಸದ್ಯ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.

ಪರಶಕ್ತಿ ಹೆಸರಿನ ದೋಣಿಯಲ್ಲಿ ನಾಲ್ವರು ಮೀನುಗಾರರು ಬಲೆಯನ್ನು ತುಂಬಿಸಿಕೊಂಡು ಮೀನುಗಾರಿಕೆ ತೆರಳುತ್ತಿದ್ದಾಗ, ದೋಣಿಯೊಳಗೆ ನೀರು ಬಂದು ಮುಗುಚಿದೆ. ಬಲೆ ನೀರಿನಲ್ಲಿ ಮುಳುಗಿದ್ದು, ಬಳಿಕ ಎರಡು ಯಾಂತ್ರಿಕೃತ ದೋಣಿಗಳ ಸಹಾಯದಿಂದ ದೋಣಿಯನ್ನು ದಡಕ್ಕೆ ತರಲಾಗಿದೆ.

ಅನೇಕ ವರ್ಷಗಳಿಂದ ಅಳಿವೆ ಬಾಗಿಲು ವ್ಯಾಪ್ತಿಯಲ್ಲಿ ಡ್ರೆಜ್ಜಿಂಗ್ ಮಾಡದೇ ಹೂಳು ತುಂಬಿಕೊಂಡಿದ್ದು ಸಮಸ್ಯೆಯ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಮೀನುಗಾರರು ಗೋಳುತೋಡಿಕೊಂಡಿದ್ದಾರೆ.

- Advertisement -

Latest News

error: Content is protected !!