Saturday, June 13, 2026
Homeತಾಜಾ ಸುದ್ದಿಆರನೇ ಮದುವೆಯಾದ ಆರೋಪ ಮಾಜಿ ಸಚಿವನ ವಿರುದ್ಧ ಪತ್ನಿಯಿಂದ ದೂರು

ಆರನೇ ಮದುವೆಯಾದ ಆರೋಪ ಮಾಜಿ ಸಚಿವನ ವಿರುದ್ಧ ಪತ್ನಿಯಿಂದ ದೂರು

- Advertisement -
- Advertisement -

ಉತ್ತರ ಪ್ರದೇಶ: ಒಂದಲ್ಲ ಎರಡಲ್ಲ ಆರನೇ ಮದುವೆಯಾಗೋದಕ್ಕೆ ಹೊರಟ ಮಾಜಿ ಸಚಿವನೊಬ್ಬನ ವಿರುದ್ಧ ಆತನ ಮೂರನೇ ಪತ್ನಿ ದೂರು ದಾಖಲಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮಾಜಿ ಸಚಿವರಾದ ಚೌಧರಿ ಬಶೀರ್‌ ವಿರುದ್ಧ ಮುಸ್ಲಿಂ ಮಹಿಳೆಯರ ವಿವಾಹ ಕಾಯಿದೆ, 2019 ಹಾಗೂ ಐಪಿಸಿಯ 504ನೇ ವಿಧಿಯಡಿ ಪ್ರಕರಣ ದಾಖಲಿಸಲಾಗಿದೆ.

ಬಶೀರ್‌ ವಿರುದ್ಧ ಅವರ ಮೂರನೇ ಪತ್ನಿಯಾದ ನಗ್ಮಾ ದೂರು ದಾಖಲಿಸಿದ್ದು, ಆಗ್ರಾದ ಮಂಟೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಶಾಯಿಸ್ತಾ ಹೆಸರಿನ ಹುಡುಗಿಯನ್ನು ಆರನೇ ಮದುವೆಯಾಗಲು ಹೊರಟಿದ್ದ ಬಶೀರ್‌ನನ್ನು ತಡೆಯಲು ಮುಂದಾದ ವೇಳೆ ತನ್ನ ಮೇಲೆ ದೈಹಿಕ ಹಲ್ಲೆ ಮಾಡಿ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿ ತನ್ನನ್ನು ಮನೆಯಿಂಧ ಹೊರಗಟ್ಟಲು ನೋಡಿದ್ದಾಗಿ ನಗ್ಮಾ ದೂರಿನಲ್ಲಿ ತಿಳಿಸಿದ್ದಾರೆ.

2012ರಲ್ಲಿ ತಾನು ಮದುವೆ ಮಾಡಿಕೊಂಡ ಬಶೀರ್‌ ಗೆ ಮಹಿಳೆಯರಿಗೆ ಕಿರುಕುಳ ಕೊಡುವುದು ಅಭ್ಯಾಸವಾಗಿಬಿಟ್ಟಿದೆ ಎಂದು ದೂರಿನಲ್ಲಿ ತಿಳಿಸಿರುವ ನಗ್ಮಾ, ಮದುವೆಯಾದ ಬಳಿಕ ತಮ್ಮ ಮೇಲೆ ಬಹಳಷ್ಟು ಬಾರಿ ದೈಹಿಕ ಹಿಂಸೆ ಹಾಗೂ ಬಲವಂತದ ದೈಹಿಕ ಸಂಬಂಧಗಳನ್ನು ಹೊಂದುವಂತೆ ಮಾಡಿದ್ದಾಗಿ ಹೇಳಿದ್ದಾರೆ.

ಮಾಜಿ ಸಚಿವರ ವಿರುದ್ಧ ಸರಣಿ ಆಪಾದನೆಗಳನ್ನು ಮಾಡಿರುವ ನಗ್ಮಾ, ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಪೊಲೀಸರಿಂದ ಸಹಾಯ ಕೋರಿದ್ದಾರೆ.

- Advertisement -

Latest News

error: Content is protected !!