Monday, June 8, 2026
Homeಕರಾವಳಿಮೀನುಗಾರಿಕಾ ದೋಣಿ ಮಗುಚಿ ಬಿದ್ದು ಮೀನುಗಾರರಿಗೆ ಗಾಯ...!

ಮೀನುಗಾರಿಕಾ ದೋಣಿ ಮಗುಚಿ ಬಿದ್ದು ಮೀನುಗಾರರಿಗೆ ಗಾಯ…!

- Advertisement -
- Advertisement -

ಕಾಸರಗೋಡು : ಮೀನುಗಾರಿಕಾ ದೋಣಿಯೊಂದು ಮಗುಚಿ ಮೂವರು ಮೀನುಗಾರರು ಗಾಯಗೊಂಡ ಘಟನೆ ಕಿಯೂರು ಸಮುದ್ರದಲ್ಲಿ ನಡೆದಿದೆ.

ಕಿಯೂರಿನ ಅಶ್ರಫ್ (46), ಮುನವ್ವರ್ (26) ಮತ್ತು ಅಜ್ಮಲ್ (20) ಗಾಯಗೊಂಡವರು ಎಂದು ತಿಳಿದುಬಂದಿದೆ. ಮೀನುಗಾರಿಕೆಗೆ ತೆರಳಿ ಮರಳುತ್ತಿದ್ದಾಗ ಇಂದು ಬೆಳಗ್ಗೆ ದುರಂತ ನಡೆದಿದೆ ಎಂದು ಹೇಳಿದ್ದಾರೆ.

ಭಾರೀ ಗಾಳಿಯ ಅಬ್ಬರಕ್ಕೆ ಸಿಲುಕಿದ ದೋಣಿ ಮಗುಚಿತು ಎಂದು ದೂರಲಾಗಿದೆ. ಗಾಯಾಳುಗಳನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!