Monday, June 8, 2026
Homeಕರಾವಳಿಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಉರುಳಿ ಬಿದ್ದ ಬಂಡೆಕಲ್ಲು; ತೆರವುಗೊಳಿಸದ್ದಿದ್ದಲ್ಲಿ ಅಪಘಾತ ಸಂಭವಿಸುವ ಎಚ್ಚರಿಕೆ!

ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಉರುಳಿ ಬಿದ್ದ ಬಂಡೆಕಲ್ಲು; ತೆರವುಗೊಳಿಸದ್ದಿದ್ದಲ್ಲಿ ಅಪಘಾತ ಸಂಭವಿಸುವ ಎಚ್ಚರಿಕೆ!

- Advertisement -
- Advertisement -

ಬೆಳ್ತಂಗಡಿ: ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬಂಡೆಯೊಂದು ರಸ್ತೆಗೆ ಉರುಳಿಬಿದ್ದ ಘಟನೆ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು ನಿನ್ನೆ ರಾತ್ರಿ ಸುರಿದ ಮಳೆಗೆ ಚಾರ್ಮಾಡಿ ಘಾಟ್ ನ ಏಳನೇ ತಿರುವಿನಲ್ಲಿ ಬಂಡೆಕಲ್ಲೊಂದು ಉರುಳಿ ರಸ್ತೆಗೆ ಬಿದ್ದಿದೆ. ಕಲ್ಲು ರಸ್ತೆಗೆ ಉರುಳಿಬಿದ್ದ ಸಂದರ್ಭ ವಾಹನ ಸಂಚಾರ ವಿರಳವಾಗಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಈಗಾಗಲೇ ಏಕ ಮುಖ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಈ ಘಾಟ್ ಪ್ರದೇಶದಲ್ಲಿ ವಿಪರೀತ ಮಂಜು ಮುಸುಕಿದ ವಾತಾವರಣ ಇರುವುದರಿಂದ ತಕ್ಷಣ ಈ ಬಂಡೆಕಲ್ಲನ್ನು ತೆರವುಗೊಳಿಸದಿದ್ದರೆ ಮಂಜು ಮುಸುಕಿ ಈ ಬಂಡೆ ಕಲ್ಲು ವಾಹನ ಸವಾರರಿಗೆ ಕಾಣದೇ ಅಪಘಾತ ಸಂಭವಿಸಬಹುದು ಎಂಬ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!