Wednesday, July 15, 2026
Homeಕರಾವಳಿಎಸ್ ಡಿಪಿಐ ಪುತ್ತೂರು ವಿಧಾನ ಸಭಾ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಸಾಗರ್ ಹಾಗೂ ಕಾರ್ಯದರ್ಶಿಯಾಗಿ ಶಾಕಿರ್...

ಎಸ್ ಡಿಪಿಐ ಪುತ್ತೂರು ವಿಧಾನ ಸಭಾ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಸಾಗರ್ ಹಾಗೂ ಕಾರ್ಯದರ್ಶಿಯಾಗಿ ಶಾಕಿರ್ ಅಳಕೆಮಜಲು ಆಯ್ಕೆ

- Advertisement -
- Advertisement -

ಪುತ್ತೂರು:- ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪುತ್ತೂರು ವಿಧಾನಸಭಾ ಕ್ಷೇತ್ರ,ನಗರ ಹಾಗೂ ಮೂರು ಬ್ಲಾಕ್ ಸಮಿತಿಗಳ 2021-2014 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಫ್ರೀಡಂ ಕಮ್ಯನಿಟಿ ಹಾಲ್ ಮಿತ್ತೂರಿನಲ್ಲಿ ಆಂತರಿಕ ಪ್ರಜಾಪ್ರಭುತ್ವದಂತೆ ನಡೆಯಿತು.

ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಸಾಗರ್,ಉಪಾಧ್ಯಕ್ಷರಾಗಿ ಹಮೀದ್ ಸಾಲ್ಮರ,ಕಾರ್ಯದರ್ಶಿಯಾಗಿ ಶಾಕಿರ್ ಅಳಕೆಮಜಲು,ಜೊತೆ ಕಾರ್ಯದರ್ಶಿ ಯಾಗಿ ಅಬ್ದುಲ್ ರಹಮಾನ್ ಮತ್ತು ಯಹ್ಯಾ ಕೂರ್ನಡ್ಕ,ಕೋಶಾಧಿಕಾರಿಯಾಗಿ ಅಶ್ರಫ್ ಬಾವು ಹಾಗೂ ಸಮಿತಿ ಸದಸ್ಯರಾಗಿ ಮಹಮ್ಮದ್ ಪಿ.ಬಿ.ಕೆ, ಅನ್ವರ್ ಪೆರುವಾಯಿ,ವಿಶ್ವನಾಥ್ ಪುಂಚತ್ತಾರು, ರಶೀದ್ ಮಠ ಉಪ್ಪಿನಂಗಡಿ,ಸಿದ್ದೀಕ್ ಕೆ.ಎ ಮತ್ತು ರಹೀಂ ಶಾಫಿ ಪುತ್ತೂರು ಆಯ್ಕೆಯಾದರು.

ಪುತ್ತೂರು ನಗರ ಸಮಿತಿಯ ಅಧ್ಯಕ್ಷರಾಗಿ ಸಿರಾಜ್ ಎ.ಕೆ ,ಕಾರ್ಯದರ್ಶಿಯಾಗಿ ಜುನೈದ್ ಸಾಲ್ಮರ ಆಯ್ಕೆ ಯಾಗಿದ್ದಾರೆ. ಕುಂಬ್ರ ಬ್ಲಾಕ್ ಅಧ್ಯಕ್ಷರಾಗಿ ಶರೀಫ್ ಕಟ್ಟತ್ತಾರು,ಕಾರ್ಯದರ್ಶಿಯಾಗಿ ಅಶ್ರಫ್ ಬಡಕ್ಕೋಡಿ,ವಿಟ್ಲ ಬ್ಲಾಕ್ ಅಧ್ಯಕ್ಷರಾಗಿ ಬದ್ರುದ್ದೀನ್ ಪುಣಚ,ಕಾರ್ಯದರ್ಶಿಯಾಗಿ ಅಬ್ದುಲ್ ರಹಮಾನ್ ಕೊಡಿಪ್ಪಾಡಿ,ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾಗಿ ಮುಸ್ತಫಾ ಮುಸ್ಲಿಯಾರ್,ಕಾರ್ಯದರ್ಶಿಯಾಗಿ ಮಜೀದ್ ಮಠ ಆಯ್ಕೆಯಾಗಿದ್ದಾರೆ

ಎಸ್ ಡಿಪಿಐ ದ.ಕ ಜಿಲ್ಲಾ ಸಮಿತಿ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್, ಉಪಾಧ್ಯಕ್ಷ ಇಕ್ಬಾಲ್ ಐ.ಎಂ.ಆರ್ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಅಶ್ರಫ್ ಮಂಚಿ ಆಂತರಿಕ ಚುನಾವಣಾ ಪ್ರಕ್ರಿಯೆಯನ್ನು ನಡೆಸಿ ಕೊಟ್ಟು ನೂತನ ಪಧಾದಿಕಾರಿಗಳಿಗೆ ಶುಭ ಹಾರೈಸಿದರು.



ಎಸ್ ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಲತೀಫ್ ಎಲ್.ಕೆ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದರು.ನಿರ್ಗಮಿತ ಕಾರ್ಯದರ್ಶಿ ಅಶ್ರಫ್ ಬಾವು ಕಳೆದ ಸಾಲಿನಲ್ಲಿ ನಡೆದ ಪಕ್ಷದ ಕಾರ್ಯಚಟುವಟಿಕೆಗಳ ವರದಿಯನ್ನು ವಾಚಿಸಿದರು.

ನಿರ್ಗಮಿತ ಅಧ್ಯಕ್ಷ ಸಿದ್ದೀಕ್ ಕೆ.ಎ ಪುತ್ತೂರು ಮಾತನಾಡಿ ಕಳೆದ ಮೂರು ವರ್ಷಗಳಲ್ಲಿ ಪಕ್ಷದ ಹೋರಾಟದ ಫಲವಾಗಿ ಜನರ ಬಳಿಗೆ ಮುಟ್ಟಲು ಸಾಧ್ಯವಾಗಿದೆ,ಹಾಗೂ ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಹಳ್ಲಿ ಹಳ್ಳಿ ಗಳಿಗೆ ನಮ್ಮ ಪಕ್ಷವು ಮುಟ್ಟುವಂತಾಗಬೇಕು,ಆ ಮೂಲಕ ಪಕ್ಷವನ್ನು ಇನ್ನಷ್ಟು ಬಲಿಷ್ಠ ಗೊಳಿಸಬೇಕೆಂದು ಹೇಳಿದರು.

ಸಮಾರೋಪ ಭಾಷಣದಲ್ಲಿ ಇಕ್ಬಾಲ್ ಐ.ಎಂ.ಆರ್ ಮಾತನಾಡಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಸ್ಪಷ್ಟ ಜಾತ್ಯತೀತ ತಳಹದಿಯೊಂದಿಗೆ ಮುನ್ನಡೆಸಬೇಕು ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪಕ್ಷದ ಸಿದ್ದಾಂತವನ್ನು ಯಾವ ರೀತಿ ಜನ ಸಾಮಾನ್ಯರ ಬಳಿ ಮುಟ್ಟಿಸಬೇಕೆಂದು ವಿವರಿಸಿದರು.ಮತ್ತು ಅಲ್ಪಸಂಖ್ಯಾತ ದಲಿತ ಹಿಂದುಳಿದ ವರ್ಗಗಳ ಮತ್ತು ಸೋಶಿತ ಸಮುದಾಯದ ನ್ಯಾಯಕ್ಕಾಗಿ ಹೋರಾಡಿ ಅವರ ನ್ಯಾಯದ ಧ್ವನಿ ಯಾಗಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವ್ಯಾಪ್ತಿಯ ಗ್ರಾಮ ಸಮಿತಿ ಮತ್ತು ಬೂತ್ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

- Advertisement -

Latest News

error: Content is protected !!