Saturday, June 6, 2026
Homeಅಪರಾಧಮಹಿಳೆ ಬ್ಯಾಗ್ ಮತ್ತು ಸರ ದರೋಡೆಗೆ ಯತ್ನ: ಸರ ಕಿತ್ತು ಆರೋಪಿಗಳು ಕಾರಿನಲ್ಲಿ ಪರಾರಿ!

ಮಹಿಳೆ ಬ್ಯಾಗ್ ಮತ್ತು ಸರ ದರೋಡೆಗೆ ಯತ್ನ: ಸರ ಕಿತ್ತು ಆರೋಪಿಗಳು ಕಾರಿನಲ್ಲಿ ಪರಾರಿ!

- Advertisement -
- Advertisement -

ಮಂಗಳೂರು : ನಗರದ ಶಿವಬಾಗ್ ನ ಸೆಂಟ್ ಆಗ್ನೆಸ್ ಕಾಲೇಜ್ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬ್ಯಾಗ್ ದರೋಡೆಗೆ ಯತ್ನಿಸಿದ ತಂಡ ಕೊನೆಗೆ ಸರ ಕಿತ್ತು ಪರಾರಿ.

ಮಹಿಳೆ ಬಳಿ ಇದ್ದ ಬ್ಯಾಗ್ ದರೋಡೆಗೆ ಯತ್ನಿಸಿದವನಿಗೆ ಪ್ರತಿರೊಧಿಸಿ ವಾಪಸ್ ಥಳಿಸಿ ಅತ್ಮರಕ್ಷಣೆ ಮಾಡಿಕೊಂಡಿದ್ದು ಈ ವೇಳೆ ಸ್ಥಳೀಯರು ದರೋಡೆಕೊರರನ್ನು ಹಿಡಿಯಲು ಪ್ರಯತ್ನಿಸಿದ್ದರು ಆದ್ರೆ ಸರ ಒಂದು ಕಿತ್ತುಕೊಂಡು ಅವರೆಲ್ಲ ಕಾರಿಗೆ ನುಗ್ಗಿ ಪರಾರಿಯಾಗಿದ್ದಾರೆ.

ನಂಬರ್ ಪ್ಲೇಟ್ ಇಲ್ಲದ ಗ್ರೇ‌ ಬಣ್ಣದ ಸ್ವೀಪ್ಟ್ ಡಿಸೈರ್ ಕಾರಿನಲ್ಲಿ ನಾಲ್ಕು ಜನ ದರೋಡೆಕೊರರು ಬಂದಿದ್ದು ಅದರಲ್ಲಿ ಮೂವರು ಕಾರಿನಿಂದ ಇಳಿದಿದ್ದು ಅದರಲ್ಲಿ ಒಬ್ಬ ಮಹಿಳೆ ಬಳಿ ಓಡಿ ಹೋಗಿ ಅವರಲ್ಲಿದ್ದ ಬ್ಯಾಗ್ ಎಳೆದು ದರೋಡೆಗೆ ಯತ್ನಿಸಿದ್ದರು ಮಹಿಳೆ ಮತ್ತು ಸ್ಥಳೀಯರಿಂದ ಬ್ಯಾಗ್ ದರೋಡೆ ತಪ್ಪಿದೆ. ಸರ ಮಾತ್ರ ಕಳೆದುಕೊಂಡಿದ್ದಾರೆ. ಇದು ಪೊಲೀಸರೇ ಮಾಡಿದ ಅಣುಕು ಕಾರ್ಯಾಚರಣೆ ಎಂಬುದು ತದನಂತರದಲ್ಲಿ ಬೆಳಕಿಗೆ ಬಂದಿದೆ

ಘಟನೆ ವಿವರ :

ವಿಡಿಯೋ ಪೊಲೀಸ್ ಗ್ರೂಪಿನಲ್ಲಿ ಬರುತ್ತಿದ್ದಂತೆ ಮಾಧ್ಯಮದ ವ್ಯಕ್ತಿಗಳು ನೋಡಿ ಹೌಹಾರಿದ್ದರು. ಹಾಡಹಗಲೇ ಈ ಪರಿ ಸರ ಕಿತ್ತು ಓಡಿದ್ದು ಮಂಗಳೂರಿನಲ್ಲಿ ಇದೇ ಮೊದಲು ಎನ್ನುವ ನೆಲೆಯಲ್ಲಿ ಆತಂಕ ವ್ಯಕ್ತವಾಗಿತ್ತು. ಕೊನೆಗೆ ಈ ವಿಡಿಯೋ ಬಗ್ಗೆ ಮಾಹಿತಿ ಕೇಳಿದಾಗ, ಒಟ್ಟು ಘಟನೆ ಪೊಲೀಸರ ಕಡೆಯಿಂದಲೇ ಸಾರ್ವಜನಿಕರ ಎಚ್ಚರಿಕೆ ಸಲುವಾಗಿ ನಡೆಯುತ್ತಿರುವ ಅಣಕು ಕಾರ್ಯಾಚರಣೆ ಎನ್ನುವುದು ತಿಳಿದುಬಂದಿದೆ. ಕಳೆದ ಒಂದು ವಾರದಲ್ಲಿ ಮಂಗಳೂರಿನ ಉರ್ವಾ ಮತ್ತು ಕದ್ರಿ ಠಾಣೆ ವ್ಯಾಪ್ತಿಯಲ್ಲಿ ಸರಣಿಯಂತೆ ಸರಗಳ್ಳತನ ನಡೆದಿದ್ದು ಅಮಾಯಕ ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದವರು ಸರ ಕಿತ್ತು ಓಡಿದ ಘಟನೆ ನಡೆದಿತ್ತು. ಸರಕಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಜನಜಾಗೃತಿಗೆ ಪೊಲೀಸರು ಈ ರೀತಿಯ ಪ್ರಹಸನ ಮಾಡುತ್ತಿದ್ದಾರೆ. ಈ ಮೂಲಕ ಒಬ್ಬಂಟಿ ಮಹಿಳೆಯರು ಬಂಗಾರ ಧರಿಸಿ ಹೋಗುವಾಗ ಜಾಗ್ರತೆ ವಹಿಸಬೇಕು ಎಂದು ಹೇಳುತ್ತಿದ್ದಾರೆ. ಅಲ್ಲದೆ, ಪೊಲೀಸರು ಈ ರೀತಿಯ ಘಟನೆ ಆದಾಗ ಯಾವ ರೀತಿ ಪತ್ತೆ ಕಾರ್ಯ ಮಾಡಬೇಕು ಎಂಬ ಬಗ್ಗೆ ಹಿರಿಯಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ.

- Advertisement -

Latest News

error: Content is protected !!