Friday, June 26, 2026
Homeಕರಾವಳಿಮಂಗಳೂರುಮೂಡಬಿದಿರೆ; ಸ. ಕಿ. ಪ್ರಾ. ಶಾಲೆ, ಮಕ್ಕಿಯಲ್ಲಿ ಉಚಿತ ಲೇಖನ ಸಾಮಾಗ್ರಿ, ಕೊಡೆ ವಿತರಣೆ

ಮೂಡಬಿದಿರೆ; ಸ. ಕಿ. ಪ್ರಾ. ಶಾಲೆ, ಮಕ್ಕಿಯಲ್ಲಿ ಉಚಿತ ಲೇಖನ ಸಾಮಾಗ್ರಿ, ಕೊಡೆ ವಿತರಣೆ

- Advertisement -
- Advertisement -

ಮೂಡಬಿದಿರೆ;  ದಿನಾಂಕ 25-06-2026ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಕ್ಕಿ ಇಲ್ಲಿ 2026-27 ನೇ ಸಾಲಿನ ಉಚಿತ ಲೇಖನ ಸಾಮಗ್ರಿ, ಕೊಡೆ ಮತ್ತು ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದಲ್ಲಿ ಶಿರ್ತಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರವೀಣ್ ಕುಮಾರ್,  ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶೈನಾಝ್ ಮತ್ತು ದಾನಿ ಶ್ರೀ ಶೇಖರ್ ಮಕ್ಕಿ ಇವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಪ್ರವೀಣ್ ಕುಮಾರ್ ಇವರು ಕೊಡ ಮಾಡಿದ ಲೇಖನ ಸಾಮಾಗ್ರಿ, ಶೇಖರ್ ಮಕ್ಕಿ ಇವರು ನೀಡಿದ ಕೊಡೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರವೀಣ್ ಕುಮಾರ್ ಇವರು ಮಾತನಾಡಿ ವಿದ್ಯಾರ್ಥಿಗಳು ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ರೀತಿಯಲ್ಲಿ ವ್ಯಾಸಂಗ ನಡೆಸಬೇಕು ಎಂದು ಕರೆ ನೀಡಿದರು. ದಾನಿ ಶೇಖರ್ ಮಕ್ಕಿ ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಪೋಷಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲೀನಾ ಡಿಸೋಜಾ  ಸ್ವಾಗತಿಸಿ ಸಹ ಶಿಕ್ಷಕಿ ಶ್ರೀಮತಿ ಬೇಬಿ ವಂದನಾರ್ಪಣೆಗೈದರು.

- Advertisement -

Latest News

error: Content is protected !!