Saturday, October 17, 2026
Homeಕರಾವಳಿಕಡಬ:ನಿಲ್ಲಿಸಿದ್ದ ರಿಕ್ಷಾ ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಸೀಟು ಭಸ್ಮ

ಕಡಬ:ನಿಲ್ಲಿಸಿದ್ದ ರಿಕ್ಷಾ ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಸೀಟು ಭಸ್ಮ

- Advertisement -
- Advertisement -

ಕಡಬ: ಮನೆಯಲ್ಲಿ ನಿಲ್ಲಿಸಿದ್ದ ಆಟೋವನ್ನು ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು  ಹಿಂಬದಿ ಬ್ಯಾಟರಿ ಸಹಿತ ಸೀಟು ಸುಟ್ಟು ಹೋದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.

 ಪಟ್ಟೆಜಾಲು ನಿವಾಸಿ ಬಾಲಕೃಷ್ಣ ಶೆಟ್ಟಿ ಅವರು  ಜ.28ರಂದು ಬೆಳಿಗ್ಗೆ ನೆಲ್ಯಾಡಿಗೆ ಬರಲೆಂದು ಆಟೋ ಸ್ಟಾರ್ಟ್ ಮಾಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ಇದರಿಂದಾಗಿ ರಿಕ್ಷಾದ ಹಿಂಬದಿಯ ಸೀಟು, ಬ್ಯಾಟರಿ ಸುಟ್ಟುಹೋಗಿದ್ದು ಚಾಲಕ  ಬೆಂಕಿ ನಂದಿಸಿ ಹೆಚ್ಚಿನ ಅನಾಹುತ  ತಪ್ಪಿಸಿದ್ದಾರೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!