Friday, June 5, 2026
Homeಕರಾವಳಿಸುಳ್ಯ; ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅಪಘಾತ, ರೋಗಿ ಸಾವು

ಸುಳ್ಯ; ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅಪಘಾತ, ರೋಗಿ ಸಾವು

- Advertisement -
- Advertisement -

ಸುಳ್ಯದ ಸರ್ಕಾರಿ ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಆಂಬ್ಯುಲೆನ್ಸ್ ನಲ್ಲಿ ಮಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಅಪಘಾತವಾಗಿ ಆಂಬ್ಯುಲೆನ್ಸ್ ನಲ್ಲಿದ ರೋಗಿ ಸಾವನ್ನಪ್ಪಿರುವ ಘಟನೆ ಅಡ್ಯಾರ್ ಕಣ್ಣೂರು ಬಳಿ ನಡೆದಿದೆ.

ಸುಳ್ಯದ ಆಲಟ್ಟಿ ಗ್ರಾಮದ ಎಲಿಕ್ಕಳ ನಿವಾಸಿ ಆನಂದ ಗೌಡ ಅವರನ್ನು ಉಸಿರಾಟದ ಸಮಸ್ಯೆ ಹಿನ್ನೆಲೆ ಸುಳ್ಯ ಜ್ಯೋತಿ  ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕರೆದೊಯ್ಯಲಾಗುತ್ತಿತ್ತು.

ಈ ಆಂಬ್ಯುಲೆನ್ಸ್  ಅಡ್ಯಾರ್ ಕಣ್ಣೂರು ಬಳಿ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಂಬುಲೆನ್ಸ್ ಚಾಲಕ ಸುಳ್ಯ ಜಯನಗರ ನಿವಾಸಿ ಪ್ರಶಾಂತ್ ಎಂಬವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದು ವಾಹನ ಜಖಂಗೊಂಡಿದೆ.ಇನ್ನು ಅಪಘಾತವಾದ ವೇಳೆ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಸಾವನ್ನಪ್ಪಿದ್ದಾರೆ. ಆದರೆ ಅವರು ಅಪಘಾತಕ್ಕೆ ಮುನ್ನವೇ ಮೃತಪಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ.

- Advertisement -

Latest News

error: Content is protected !!