Tuesday, June 30, 2026
Homeಇತರಮಡಿಕೇರಿ: ಅಮ್ಮನ ನೆನಪುಗಳಿದ್ದ ಮೊಬೈಲ್ ಫೋನ್ ಕೊನೆಗೂ ಪತ್ತೆ!

ಮಡಿಕೇರಿ: ಅಮ್ಮನ ನೆನಪುಗಳಿದ್ದ ಮೊಬೈಲ್ ಫೋನ್ ಕೊನೆಗೂ ಪತ್ತೆ!

- Advertisement -
- Advertisement -

ಮಡಿಕೇರಿ: ಕೆಲವು ತಿಂಗಳುಗಳ ಹಿಂದೆ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ತಾಯಿಯ ಮೊಬೈಲ್ ಫೋನ್ ಕೊನೆಗೂ ಪತ್ತೆಯಾಗಿದೆ. ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಕುಶಾಲನಗರ ತಾಲೂಕಿನ ಗುಮ್ಮನಕೊಲ್ಲಿ ನಿವಾಸಿ ಮಹಿಳೆ ಪ್ರಭಾ ಎಂಬುವರ ಮೊಬೈಲ್ ಫೋನ್ ಆಸ್ಪತ್ರೆಯಲ್ಲೇ ಕಾಣೆಯಾಗಿತ್ತು.

ಅಮ್ಮನ ಮೊಬೈಲ್ ಫೋನ್ ಬೇಕೆಂದು ಪುತ್ರಿ ಹೃತಿಕ್ಷಾ ಅಳಲು ತೋಡಿಕೊಂಡಿದ್ದರು. ಮೇ 16 ರಂದು ಪ್ರಭಾ ಕೋವಿಡ್ ನಿಂದಾಗಿ ಸಾವನ್ನಪ್ಪಿದ್ದರು. ಮೊಬೈಲ್ ನಲ್ಲಿ ತಾಯಿಯ ನೆನಪುಗಳಿವೆ ಎಂದು ಪುತ್ರಿ ಅಳಲು ತೋಡಿಕೊಂಡಿದ್ದಳು. ಸಾಮಾಜಿಕ ಜಾಲತಾಣಗಳಲ್ಲಿ ಪುತ್ರಿಯ ಮನವಿ ವೈರಲ್ ಆಗಿತ್ತು.

ಇದೀಗ ಮೂರು ತಿಂಗಳ ಬಳಿಕ ಆಸ್ಪತ್ರೆ ಮೊಬೈಲ್ ಫೋನ್ ನೀಡಿದ್ದು, ಮೊಬೈಲ್ ಫೋನ್ ಇಷ್ಟು ದಿನಗಳ ಕಾಲ ಎಲ್ಲಿತ್ತು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಮಡಿಕೇರಿ ನಗರ ಪೊಲೀಸ್ ಠಾಣೆಗೆ ಮೊಬೈಲ್ ಫೋನ್ ಅನ್ನು ಕೋವಿಡ್ ಆಸ್ಪತ್ರೆ ಸಿಬ್ಬಂದಿ ಹಸ್ತಾಂತರಿಸಿದ್ದಾರೆ.

- Advertisement -

Latest News

error: Content is protected !!