Saturday, June 6, 2026
Homeಇತರಮೂಡಿಗೆರೆಯಲ್ಲಿ ಕಾಡು ಹಂದಿ ದಾಳಿ: ವೃದ್ಧ ಆಸ್ಪತ್ರೆಗೆ ದಾಖಲು

ಮೂಡಿಗೆರೆಯಲ್ಲಿ ಕಾಡು ಹಂದಿ ದಾಳಿ: ವೃದ್ಧ ಆಸ್ಪತ್ರೆಗೆ ದಾಖಲು

- Advertisement -
- Advertisement -

ಚಿಕ್ಕಮಗಳೂರು: ಕಾಡು ಹಂದಿ ದಾಳಿ ಮಾಡಿದ ಪರಿಣಾಮ ವೃದ್ಧನಿಗೆ ಗಂಭೀರ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಕೂವೆ ಬಳಿ ಈ ಘಟನೆ‌ ನಡೆದಿದೆ.

ಕಾಡು ಹಂದಿ ದಾಳಿಯಿಂದ ಎಪ್ಪತ್ತೈದು ವರ್ಷದ ರಾಜಶೇಖರ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳು ರಾಜಶೇಖರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಜಶೇಖರ ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡು ಹಂದಿ ದಾಳಿ ಮಾಡಿದ್ದು, ಎದೆ, ಸೊಂಟ, ಕೈ ಕಾಲುಗಳಿಗೆ ಗುದ್ದಿ ಗಾಯಗಳಾಗಿವೆ.

ಗಾಯಗೊಂಡಿರುವ ರಾಜಶೇಖರ ಅವರನ್ನು ಮೂಡಿಗೆರೆ ತಾಲೂಕಿನ ನಿಡುವಾಳ‌ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.

- Advertisement -

Latest News

error: Content is protected !!