Thursday, June 4, 2026
Homeತಾಜಾ ಸುದ್ದಿಬಂಟ ಸಂಪ್ರದಾಯದಂತೆ ಪಂಚಭೂತಗಳಲ್ಲಿ ಲೀನವಾದ ಮುತ್ತಪ್ಪ ರೈ

ಬಂಟ ಸಂಪ್ರದಾಯದಂತೆ ಪಂಚಭೂತಗಳಲ್ಲಿ ಲೀನವಾದ ಮುತ್ತಪ್ಪ ರೈ

- Advertisement -
- Advertisement -

ಬೆಂಗಳೂರು: ಮಾಜಿ ಭೂಗತ ದೊರೆ ಎನ್.ಮುತ್ತಪ್ಪ ರೈಯವರ (68ವರ್ಷ) ಪಾರ್ಥಿವ ಶರೀರವನ್ನು ಬೆಂಗಳೂರಿನ ಬಿಡದಿಯ ನಿವಾಸದ ಆವರಣದಲ್ಲಿ ಬಂಟ ಸಮುದಾಯದ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಿಲಾಯಿತು.

ಪುತ್ರ ರಿಕ್ಕಿ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಲಾಕ್ ಡೌನ್ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ರೈ ಅಂತ್ಯಕ್ರಿಯೆಯಲ್ಲಿ ಕುಟುಂಬ ಸದಸ್ಯರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.

ಭೂಗತ ಲೋಕದ ದೊರೆ ಎನ್ನಿಸಿಕೊಂಡಿದ್ದ ಮುತ್ತಪ್ಪ ರೈ ದೀರ್ಘಕಾಲ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಮಧ್ಯಾಹ್ನ ಪಾರ್ಥಿವ ಶರೀರವನ್ನು ಬಿಡದಿಗೆ ರವಾನಿಸಲಾಗಿತ್ತು. ಅಲ್ಲಿ ಕೆಲವು ನಿಮಿಷಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ದೇಹಕ್ಕೆ 5 ಗುಂಡು ಬಿದ್ದಿದ್ದರೂ ಸಾವಿನಿಂದ ಪಾರಾಗಿದ್ದೆ. ಹೀಗಾಗಿ ಇದೀಗ ನನ್ನ ದೊಡ್ಡ ಶತ್ರು ಕ್ಯಾನ್ಸರ್. ನಾನು ಅದರ ವಿರುದ್ಧ ಹೋರಾಡಿ ಖಂಡಿತ ಗೆದ್ದು ಬರುತ್ತೇನೆ ಎಂದು ಕೆಲದಿನಗಳ ಹಿಂದೆ ತಮ್ಮ ಬಿಡದಿಯ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು

- Advertisement -

Latest News

error: Content is protected !!