Sunday, April 28, 2024
Homeತಾಜಾ ಸುದ್ದಿಮುಂಬೈ: ಒಟ್ಟಿಗೆ ಪರೀಕ್ಷೆ ಬರೆದ ಅಪ್ಪ-ಮಗ  ತಂದೆಗೆ ಹೇಳಿಕೊಟ್ಟ ಮಗ ಫೈಲ್: ಕೆಲಸ ಮಾಡುತ್ತಲೇ ಓದಿದ...

ಮುಂಬೈ: ಒಟ್ಟಿಗೆ ಪರೀಕ್ಷೆ ಬರೆದ ಅಪ್ಪ-ಮಗ  ತಂದೆಗೆ ಹೇಳಿಕೊಟ್ಟ ಮಗ ಫೈಲ್: ಕೆಲಸ ಮಾಡುತ್ತಲೇ ಓದಿದ ಅಪ್ಪ ಪಾಸ್

spot_img
- Advertisement -
- Advertisement -

ಮುಂಬೈ: ಒಟ್ಟಿಗೆ ಪರೀಕ್ಷೆ ಬರೆದಿದ್ದ ಅಪ್ಪ-ಮಗ ಇಬ್ಬರಲ್ಲಿ ಅಪ್ಪ ಪಾಸ್ ಆಗಿ, ಮಗ ಫೈಲ್ ಅಪರೂಪದ ಪ್ರಸಂಗ ಮಹಾರಾಷ್ಟ್ರದಲ್ಲಿ ನಡೆದಿದೆ.

ಶನಿವಾರ ಮಹಾರಾಷ್ಟ್ರದ ಶಿಕ್ಷಣ ಮಂಡಳಿ 10ನೇ ತರಗತಿ‌ ಫಲಿತಾಂಶ ಪ್ರಕಟಿಸಿದೆ.ಬಡತನದ ಹಿನ್ನೆಲೆಯಲ್ಲಿ 7 ನೇ ತರಗತಿಯ ಬಳಿಕ ಶಾಲೆಯನ್ನು ತೊರೆದಿದ್ದ ಭಾಸ್ಕರ ವಾಘ್ಮಾರೆ‌ ಮತ್ತು ಪುತ್ರ ಸಾಹಿಲ್ ಜೊತೆ 10ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದರು.


ಮಗನೂ ಈ ವರ್ಷ ಪರೀಕ್ಷೆಗೆ ಹಾಜರಾಗಲಿದ್ದ ಕಾರಣ ಆತನ ಪುಸ್ತಕ ತೆಗೆದುಕೊಂಡು ಓದಿದ್ದರು. ಪ್ರತಿ ದಿನ ಕೆಲಸ ಮುಗಿದ ಬಳಿಕ ಓದುತ್ತಿದ್ದರು. ಕೊನೆಗೆ ಪರೀಕ್ಷೆ ಬರೆದು ವಾಘ್ಮಾರೆ ಪಾಸ್ ಆಗಿದ್ದಾರೆ. ಆದರೆ ಅಪ್ಪನಿಗೆ ಹೇಳಿ ಕೊಟ್ಟಿದ್ದ ಮಗ  ಮಾತ್ರ ಫೈಲ್ ಆಗಿದ್ದಾನೆ.

ಈ ಬಗ್ಗೆ ಮಾತನಾಡಿದ ಭಾಸ್ಕರ್ ತಾನು ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಕ್ಕೆ ಸಂತಸವಿದೆಯಾದರೂ ಮಗ ಎರಡು ವಿಷಯಗಳಲ್ಲಿ ಫೈಲ್ ಆಗಿದ್ದಾನೆ. ಆತನಿಗೆ ಅದನ್ನು ಪಾಸ್ ಮಾಡಲು ನೆರವಾಗುವುದಾಗಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!