Monday, June 29, 2026
Homeತಾಜಾ ಸುದ್ದಿಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡದ 'ಲೇಡಿ ಪವರ್ ಸ್ಟಾರ್ ʼ: ಸಾಯಿ ಪಲ್ಲವಿಯ ಹೇಳಿಕೆಯೇ ಸಿನಿಮಾ...

ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡದ ‘ಲೇಡಿ ಪವರ್ ಸ್ಟಾರ್ ʼ: ಸಾಯಿ ಪಲ್ಲವಿಯ ಹೇಳಿಕೆಯೇ ಸಿನಿಮಾ ಸೋಲಿಗೆ ಕಾರಣವಾಯ್ತಾ?

- Advertisement -
- Advertisement -

ಲೇಡಿ ಪವರ್ ಸ್ಟಾರ್’ ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ನಟನೆಯ ‘ವಿರಾಟ ಪರ್ವಂ’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಜೂನ್ 17ರಂದು ‘ವಿರಾಟ ಪರ್ವಂ’ ಸಿನಿಮಾ ತೆರೆಗೆ ಬಂದಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ದೊಡ್ಡ ಹವಾ ಸೃಷ್ಟಿಸುವಲ್ಲಿ ಎಡವಿದೆ. ಅಂದುಕೊಂಡಮಟ್ಟಕ್ಕೆ ಸಿನಿಮಾ ಕಲೆಕ್ಷನ್ ಮಾಡುವಲ್ಲಿ ಸೋತಿದೆ. ಮೂರು ದಿನಗಳಿಗೆ 10 ಕೋಟಿ ರೂ. ಕೂಡ ಗಳಿಕೆ ಆಗಿಲ್ಲ ಅನ್ನೋದು ಚಿತ್ರತಂಡಕ್ಕೆ ಬೇಸರ ಉಂಟು ಮಾಡಿದೆ.

ವಿರಾಟ ಪರ್ವಂ’ ರಾಣಾ ದಗ್ಗುಬಾಟಿ ಹೀರೋ ಆಗಿದ್ದರೂ, ಸಾಯಿ ಪಲ್ಲವಿ ಪಾತ್ರವೇ ಪ್ರಮುಖವಾಗಿತ್ತು. ಅವರೇ ಚಿತ್ರದ ನಿಜವಾದ ಹೀರೋ ಎಂಬ ಮಾತುಗಳು ಚಿತ್ರತಂಡದಿಂದಲೇ ಕೇಳಿಬಂದಿದ್ದವು. ಹಾಗಾಗಿ, ಸಿನಿಮಾಕ್ಕೆ ದೊಡ್ಡ ಓಪನಿಂಗ್ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ವಿಶ್ವಾದ್ಯಂತ ಮೂರು ದಿನಗಳಿಗೆ 5+ ಕೋಟಿ ರೂಪಾಯಿ ಗಳಿಕೆ ಆಗಿದೆ. ಇದು ತೀರ ಕಡಿಮೆ ಪ್ರಮಾಣದ ಗಳಿಕೆ ಆಗಿದೆ. ಸಾಯಿ ಪಲ್ಲವಿಗೆ ತೆಲುಗು ರಾಜ್ಯಗಳಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಅಲ್ಲಿ ‘ಲೇಡಿ ಪವರ್ ಸ್ಟಾರ್’ ಎಂದು ಕರೆಯುತ್ತಾರೆ. ಹೀಗಿದ್ದರೂ ಕೂಡ ಸಿನಿಮಾಗೆ ಯಾವುದೇ ಉಪಯೋಗವಾಗಿಲ್ಲ ಅನ್ನೋದು ಬೇಸರದ ಸಂಗತಿ.

ಇನ್ನು, ಈಚೆಗೆ ಕಾಶ್ಮೀರಿ ಪಂಡಿತ ಹತ್ಯೆ ಕುರಿತಂತೆ ಸಾಯಿ ಪಲ್ಲವಿ ನೀಡಿದ್ದ ಹೇಳಿಕೆ ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಅದರ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದವು. ಕೊನೆಗೆ ಇನ್ನೊಮ್ಮೆ ತಮ್ಮ ಹೇಳಿಕೆ ಕುರಿತು ಸಾಯಿ ಪಲ್ಲವಿ ಸ್ಪಷ್ಟನೆ ನೀಡಬೇಕಾಯ್ತು. ಇದು ಸಿನಿಮಾದ ಮೇಲೂ ಪರಿಣಾಮ ಬೀರಿತೇ ಎಂಬ ಚರ್ಚೆಗಳು ಈಗ ಆರಂಭವಾಗಿವೆ. ಆದರೆ, ಇದೊಂದು ಗಂಭೀರ ಕಥಾಹಂದರವುಳ್ಳ ಸಿನಿಮಾ. ಇಡೀ ಕಥೆ ನಕ್ಸಲಿಸಂ ಸುತ್ತ ಸಾಗುತ್ತದೆ. ಹಾಗಾಗಿ, ಇದು ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

- Advertisement -

Latest News

error: Content is protected !!