- Advertisement -
![]()
- Advertisement -
ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ಯುವಕನಿಗೆ ಅಪರಿಚಿತ ತಂಡವೊoದು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನ.12 ರಂದು ರಾತ್ರಿ ನಡೆದಿದೆ.
ಆದರ್ಶ ನಗರದ ನಿವಾಸಿ ಬಾತಿಷ ಎಂಬವರು ಉಪ್ಪಿನಂಗಡಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು, ನಿನ್ನೆ ರಾತ್ರಿ ಇನೋವಾ ಹಾಗೂ ರಿಟ್ಜ್ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಕಬಾಬ್ ನ 2೦ ರೂಪಾಯಿಗೆ ತಗಾದೆ ತೆಗೆದಿದ್ದು, ಬಾತಿಷ್ ಅವರ ಮೇಲೆ ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಬಾತಿಷ ಅವರು ಗುಂಪಿನ ವಿರುದ್ಧ ದೂರು ನೀಡಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


