Tuesday, June 30, 2026
Homeಕರಾವಳಿಬಂಟ್ವಾಳ: ಮನೆಗೆ ಸಾಮಾಗ್ರಿ ತರಲೆಂದು ಹೋದ ಯುವತಿ ನಾಪತ್ತೆ...!

ಬಂಟ್ವಾಳ: ಮನೆಗೆ ಸಾಮಾಗ್ರಿ ತರಲೆಂದು ಹೋದ ಯುವತಿ ನಾಪತ್ತೆ…!

- Advertisement -
- Advertisement -

ಬಂಟ್ವಾಳ: ಮನೆಗೆ ಸಾಮಾಗ್ರಿ ತರಲೆಂದು ಹೊರ ಹೋದ ಯುವತಿಯೋರ್ವಳು ವಾಪಾಸು ಬರದೆ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಮಧುಗಿರಿಯಲ್ಲಿ ನಡೆದಿದೆ. ನಾಪತ್ತೆಯಾದ ಯುವತಿಯನ್ನು ದಿವ್ಯಾ ಅವರ ಹಿರಿಯ ಪುತ್ರಿ ಜ್ಯೋತಿ (28) ಎಂದು ಗುರುತಿಸಲಾಗಿದೆ.

ನ. 17ರಂದು ಬೆಳಿಗ್ಗೆ ಯುವತಿ ಮನೆಗೆ ಸಾಮಾಗ್ರಿ ತರುವುದಾಗಿ ತಾಯಿಯಲ್ಲಿ ತಿಳಿಸಿ ತೆರಳಿದಾಕೆ ಸಂಜೆವರೆಗೂ ಮನೆಗೆ ವಾಪಾಸು ಬಂದಿಲ್ಲ. ಆಕೆಯ ಮೊಬೈಲ್ ನಂಬರ್ ಕೂಡಾ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ತಾಯಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Latest News

error: Content is protected !!