Thursday, June 4, 2026
Homeಕರಾವಳಿಉಡುಪಿಉಡುಪಿ: ಹೋರಿಗೆ ಬೈಕ್ ಢಿಕ್ಕಿ...! ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವು..!

ಉಡುಪಿ: ಹೋರಿಗೆ ಬೈಕ್ ಢಿಕ್ಕಿ…! ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವು..!

- Advertisement -
- Advertisement -

ಉಡುಪಿ: ದ್ವಿಚಕ್ರ ವಾಹನವೊಂದು ಹೋರಿಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಳಪುವಿನಲ್ಲಿ ನಡೆದಿದೆ. ಮೃತ ಬೈಕ್ ಸವಾರನನ್ನು ಫರಾನ್ ಆಲಿ ಎಂದು ಗುರುತಿಸಲಾಗಿದೆ.

ಫರಾನ್‌ ಆಲಿ ಪರಿಚಯಸ್ಥ ನವಾಜ್ ಎಂಬುವವರನ್ನು ಅತಿವೇಗದಿಂದ ಓವರ್ ಟೇಕ್ ಮಾಡಿಕೊಂಡು ಮುಂದಕ್ಕೆ ಹೋಗಿ ರಸ್ತೆಯಲ್ಲಿದ್ದ ಹೋರಿಗೆ ಡಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ಪರಿಣಾಮ ಬೈಕ್ ಸಮೇತ ಫರಾನ್ ಆಲಿಯು ರಸ್ತೆಗೆ ಬಿದ್ದಿದ್ದರು.

ಈ ಆಫಘಾತದಿಂದ ಫರಾನ್‌ ಆಲಿಯ ತಲೆಗೆ ತೀವ್ರ ತರಹದ ಗಾಯವಾಗಿದ್ದು, ಈ ವೇಳೆ ಸ್ಥಳೀಯರು ಬಂದು ಫರಾನ್ ಆಲಿಯವರನ್ನು ಉಡುಪಿಯ ಖಾಸಗಿ ದಾಖಲು ಮಾಡಿದ್ದರು.

ಢಿಕ್ಕಿ ಹೊಡೆದ ಹೋರಿಯನ್ನು ಸ್ಥಳೀಯ ನಿವಾಸಿ ಬೆಳಪು ನಿವಾಸಿ ಹಸನಬ್ಬರವರು ಸ್ಥಳದಲ್ಲಿಯೇ ಪುಥಮ ಚಿಕಿತ್ಸೆ ನೀಡಿ ಹೆಚ್ಚಿನ ಆರೈಕೆಗಾಗಿ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ಹೋರಿ ಚಿಕಿತ್ಸೆ ಫಲಿಸದೇ ಮೃತಪಟ್ಟಿತ್ತು. ಇಂದು ಬೈಕ್ ಸವಾರ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ, ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!